Mysore
22
broken clouds
Light
Dark

ರಾಜ್ಯಪಾಲರು ಬಿಜೆಪಿ ಕೈಗೊಂಬೆ; ಅವರ ನೋಟಿಸ್‌ಗೆ ಹೆದರಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ಇದಕ್ಕೆಲ್ಲ ನಾನು ಹೆದರುವುದಿಲ್ಲ, ನಾವು ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ. ತಪ್ಪು ಮಾಡಿದ್ದರೆ ತಾನೇ ಹೆದರುವುದು. ರಾಜ್ಯಪಾಲರು ಕೇಂದ್ರ ಬಿಜೆಪಿ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ ಎಂದು ಮುಡಾ ಹಗರಣ ಸಂಬಂದ ರಾಜ್ಯಪಾಲರು ಶೋಕಾಸ್‌ ನೋಟಿಸ್‌ ನೀಡಿರುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶಭರಿತ ಮಾತುಗಳನ್ನಾಡಿದರು..

ನಗರದಲ್ಲಿ ಶುಕ್ರವಾರ(ಆ.2) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆದವನು ನಾನು. ಸರ್ಕಾರ ಅಸ್ಥಿರಗೊಳಿಸಲು ಅವರೆಲ್ಲಾ ಯತ್ನಿಸುತ್ತಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ನೋಟಿಸ್‌ಗೆ ನಾನೇಕೆ ಹೆದರಲಿ. ಅಶೋಕ್‌ ಹೆದರಿರಬೇಕು ಅವರಿಗೆ ಭಯ ನನಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಟಿ.ಜೆ ಅಹ್ರಾಂ ಒಬ್ಬ ಬ್ಲಾಕ್‌ ಮೇಲರ್.‌ ಜುಲೈ 26ರ ಬೆಳಿಗ್ಗೆ 11:30 ಕ್ಕೆ ದೂರು ಕೊಡುತ್ತಾನೆ. ಆ ದೂರಿನ ಪರಾಮರ್ಶೆ ಮಾಡದೆ ಆ ದಿನ ಸಂಜೆ ಶೋಕಾಸ್‌ ನೋಟಿಸ್‌ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್‌ಕೆ ಅತೀಕ್‌ ಗೆ ಹೇಳುತ್ತಾರೆ. ಜೊಲ್ಲೆ, ಮುರುಗೇಶ್‌ ನಿರಾಣಿ, ಜರ್ನಾರ್ದನ ರೆಡ್ಡು ವಿರುದ್ಧದ ದೂರು ಇನ್ನೂ ಹಾಗೆಯೇ ಇವೆ. ಅವರಿಗೆ ಇಲ್ಲದ ಶೋಕಾಸ್‌ ನೋಟಿಸ್‌ನ್ನು ನನಗೆ ತರಾತುರಿಯಲ್ಲಿ ಕೊಟ್ಟಿದ್ದಾರೆ ಎಂದರು.