Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನನ್ನ ರುಣವನ್ನು ತೀರಿಸಲಿಕ್ಕೆ ಒಂದು ಅವಕಾಶ ನೀಡಿ : ಯದುವೀರ್‌ ಒಡೆಯರ್‌

ಮೈಸೂರು : ನಮ್ಮ ವಂಶದ ಹಿರಿಯರ ರುಣ ತೀರಿಸಲಿಕ್ಕೆ ನಾನನಗೆ ಅವಕಾಶ ನೀಡಿ ಎಂದು ಕೇಳುತ್ತಿಲ್ಲ. ನನ್ನ ರುಣವನ್ನು ತೀರಿಸಲಿಕ್ಕೆ ಒಂದು ಅವಕಾಶ  ನೀಡಿ ಎಂದು ಕೇಳುತ್ತಿದ್ದೇನೆ ಎಂದು ಮೈಸೂರು-ಕೊಡಗು ಮೈತ್ರಿ ಅಭ್ಯರ್ಥಿ ಯದುವೀರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್‌ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ದತ್ತು ಸ್ವೀಕಾರದಿಂದ ಇಂದಿನ ವರೆಗೆ 9 ವರ್ಷಗಳ ಕಾಲ ನನಗೆ ನೀಡಿದ ಪ್ರೀತಿ ಹಾಗೂ ಬೆಂಬಲದ ರುಣವನ್ನು ತೀರಿಸಲು ನನಗೆ ಒಂದು ಅವಕಾಶ ನೀಡಿ ಎಂದು ಅವರು ತಿಳಿಸಿದರು.

ಅನೇಕರು,  ಹಿಂದೆ ಮೈಸೂರು ಅರಸರು ಮಾಡಿದ ಕೆಲಸಕ್ಕಾಗಿ ನಿಮ್ಮ ರುಣ ತೀರಿಸಲು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿದಿದ್ದಾರೆ. ಆ ರೀತಿ ಯಾವುದೇ ಉದ್ದೇಶ ಇಲ್ಲ. ಅಂದಿನ ಕಾಲದಲ್ಲಿ ಮಹಾರಾಜರು ತಮ್ಮ ರಾಜ ಧರ್ಮಕ್ಕೆ ಅನುಗುಣವಾಗಿ ಅವರ ಸೇವೆ ಮಾಡಿದ್ದಾರೆ. ಆದರೇ ನನ್ನ ದತ್ತು ಸ್ವೀಕಾರದ ಬಳಿಕ ಒಂಬತ್ತು ವರ್ಷಗಳ ಕಾಲ ನಿಮಗೆ ನಾನು ಚಿರರುಣಿಯಾಗಿದ್ದೇನೆ. ಆ ರುಣವನ್ನು ನಾನು ತೀರಿಸಲಿಕ್ಕೆ ನನಗೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ವಿಕಸಿತ ಭಾರತಕ್ಕಾಗಿ ನಾವೆಲ್ಲರೂ ಕೆಲಸ ಮಾಡಬೇಕು : ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳು ದೇಶದ ಪ್ರಗತಿಗಾಗಿ ಮಾಡುತ್ತಿರುವ ಕೆಲಸ. ಅವರ ದೂರದೃಷ್ಠಿಯನ್ನು ನೋಡುತ್ತಿದ್ದರೆ ನಮ್ಮ ಮುಂದೆ ಇರುವ ಸಂಕಷ್ಟಗಳು ಸಣ್ಣದಾಗಿ ಕಾಣಿಸುತ್ತದೆ.

ಪ್ರಧಾನಮಂತ್ರಿಗಳ 2047ರ ವಿಕಸಿತ ಭಾರತದ ಮೇಲೆ ಇಟ್ಟಿರುವ ಕನಸಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಕಳೆದ ಹತ್ತು ವರ್ಷ ಅವರು ಮಾಡಿರುವ ಕೆಲಸವೇ ನಮಗೆಲ್ಲಾ ಸ್ಪೂರ್ತಿ ಎಂದು ಹೇಳಿದರು.

 

Tags:
error: Content is protected !!