Mysore
25
overcast clouds

Social Media

ಮಂಗಳವಾರ, 24 ಜೂನ್ 2025
Light
Dark

143 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ : ಸ್ಟ್ರಾಂಗ್ ರೂಮ್ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್

ಮೈಸೂರು : ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಗೆ ನಿನ್ನೆ ಸಂಜೆ ಆರು ಗಂಟೆಗೆ ಮತದಾನ ಮುಗಿದಿದ್ದು ಜಿಲ್ಲೆಯಲ್ಲಿರುವ ಒಟ್ಟು 143 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.

ಮೈಸೂರು ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ನಡೆದ ಚುನಾಚವಣೆಯ ಮತ ಎಣಿಕೆಯು ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಮೇ.13 ರಂದು ಬೆಳಗ್ಗೆ 8 ಗಂಟೆಯಿಂದ ನಡೆಯಲಿದ್ದು, ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇವಿಎಂ ಯಂತ್ರಗಳಿರುವ ಕೊಠಡಿಯನ್ನು ಸಂಪೂರ್ಣವಾಗಿ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಕಿಟಕಿ, ಬಾಗಿಲುಗಳನ್ನೂ ಮುಚ್ಚಿದ್ದಾರೆ. ಕಾಲೇಜಿನ ಸುತ್ತ ಪೊಲೀಸರು ಮತ್ತು ಅರೆಸೇನಾಪಡೆ ಹದ್ದಿನ ಕಣ್ಣಿರಿಸಿದ್ದಾರೆ.

ಶನಿವಾರ ಬೆಳಿಗ್ಗೆ ಅಧಿಕಾರಿಗಳು ಅಭ್ಯರ್ಥಿಗಳ ಸಮ್ಮುಖದಲ್ಲಿ ಬಾಗಿಲಿಗೆ ಹಾಕಿದ ಸೀಲ್ ತೆರೆಯಲಿದ್ದಾರೆ. ಮೇ.13ರಂದು ಬೆಳಿಗ್ಗೆ ಆರು ಗಂಟೆಯಿಂದ ಮೇ.14ರ ಬೆಳಿಗ್ಗೆ ಆರು ಗಂಟೆಯವರೆಗೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಹೊರಡಿಸಿ ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶಿಸಿದ್ದಾರೆ.

ಈ ವೇಳೆ ಚುನಾಯಿತ ಅಭ್ಯರ್ಥಿಯ ವಿಜಯೋತ್ಸವ ಮೆರವಣಿಗೆ, ವಾಸದ ಮನೆ ಹಾಗೂ ಸಾರ್ವಜನಿಕ ಜಾಗದಲ್ಲಿ ಪಟಾಕಿ ಸಿಡಿಸುವುದು, ಸ್ಪೋಟಕ ಹಾಗೂ ಮಾರಕ ವಸ್ತುಗಳ ಸಾಗಾಟ, ಮೆರವಣಿಗೆ ಹಾಗೂ ಪ್ರಚೋದನಕಾರಿ ಭಾಷಣ ಮಾಡುವುದು, ಧ್ವನಿವರ್ಧಕ, ಡಿ.ಜೆ, ಬೈಕ್ ಜಾಥಾ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!