Mysore
28
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಆತ್ಮಹತ್ಯೆ ಯತ್ನಿಸಿದ ಅರಣ್ಯ ಇಲಾಖೆ ಗುತ್ತಿಗೆ ನೌಕರ

ಮೈಸೂರು : ಅರಣ್ಯ ಇಲಾಖೆ ಹಂಗಾಮಿ ಜೀಪ್ ಚಾಲಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿ ಗ್ರಾಮದ ವಿನೋದ್ (24) ಆತ್ಮಹತ್ಯೆಗೆ ಯತ್ನಿಸಿ‌ದ ಯುವಕ. ಮೇಲಾಧಿಕಾರಿಗಳ ಕಿರುಕುಳದಿಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.

ವಿನೋದ್​ ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್​ನ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಕ್ರಿಮಿನಾಶಕ ಸೇವಿಸಿದ್ದಾನೆ. ಈ ವೇಳೆ, ಪ್ರಜ್ಞಾಹೀನನಾಗಿದ್ದ ವಿನೋದ್‌ನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಲ್ಲಿನ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಡಿಆರ್​ಎಫ್​ಒ ನವೀನ್, ಜೀಪ್​ ಟೈರ್ ಪಂಚರ್​ ಆಗಿದ್ದ ಹಿನ್ನೆಲೆ ನಾನು ವಿನೋದ್​​ಗೆ, ನಮಗೆ ಗೊತ್ತಿಲ್ಲ, ನೀವೇ ಪಂಚರ್​ ಹಾಕಿಸಬೇಕು ಎಂದು ಸುಮ್ಮನೆ ಗದರಿಸಿದೆ. ಅಷ್ಟಕ್ಕೆ ವಿನೋದ್​ ನನ್ನ ವಿರುದ್ಧ ದೂರು ನೀಡಲು ಕಚೇರಿಗೆ ತೆರಳಿದ್ದರು. ಕಚೇರಿಯಲ್ಲಿ ಏನಾಗಿದೆ ಗೊತ್ತಿಲ್ಲ. ಬಳಿಕ ಇಲ್ಲಿನ ವಸತಿಗೃಹಕ್ಕೆ ಬಂದಿದ್ದಾರೆ. ಈ ವೇಳೆ, ನಾನು ಕಾಫಿ ಕುಡಿಯಲು ಹೋಗಿದ್ದೆ. ನಾನು ಬರುವಷ್ಟರಲ್ಲಿ ವಿಷ ಸೇವಿಸಿದ್ದಾನೆ ಎಂದು ಹೇಳಿದರು. ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ನಮಗೆ ಹಲ್ಲೆ ಮಾಡುವ ಯಾವುದೇ ಹಕ್ಕಿಲ್ಲ. ಬುಧವಾರ ಸಂಜೆ 5.45 ಸುಮಾರಿಗೆ ವಿಷ ಸೇವಿಸಿದ್ದಾರೆ. ಈ ಬಗ್ಗೆ ತಿಳಿದ ತಕ್ಷಣ ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಿದೆವು ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!