Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ವಿದ್ಯಾರ್ಥಿ ದಿಸೆಯಲ್ಲೇ ಸಾಧನೆಗೆ ದಾರಿ ಕಂಡುಕೊಳ್ಳಿ : ಡಾ.ವೀರೇಂದ್ರ ಹೆಗ್ಗಡೆ

ಮೈಸೂರು: ವಿದ್ಯಾರ್ಥಿ ದಿಸೆಯಲ್ಲಿಯೇ ವಿದ್ಯಾರ್ಥಿಗಳು ತಮಗಿಷ್ಟವಾದ ಯಾವುದಾದರೊಂದು ಕ್ಷೇತ್ರವನ್ನು ಆರಿಸಿಕೊಂಡು ಸಾಧನೆ ವಾಡಿದಲ್ಲಿ ಮುಂದಿನ ಭವಿಷ್ಯ ಉಜ್ವಲವಾಗಬಲ್ಲದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದ ಲಕ್ಷ್ಮಿಪುರಂನಲ್ಲಿರುವ ಎಸ್‌ಡಿಎಂ ಕಾಲೇಜು ಆವರಣದಲ್ಲಿ ಎಂಎಂಕೆ, ಎಸ್‌ಡಿಎಂ ಮಹಾ ವಿದ್ಯಾಲುಂದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ಪ್ರಭಿಗ್ಯಾನ್’ ಅಂತರ ಕಾಲೇಜು ಹಬ್ಬವನ್ನು ಉದ್ಘಾಟಿಸಿ ಅವರು ವಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿುಯಲ್ಲಿಯೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಸುಪ್ತವಾಗಿರುವ ಪ್ರತಿಭೆಯನ್ನು ಹೊರತರುವ ಕೆಲಸವಾಗಬೇಕು. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ. ವಿದ್ಯಾಸಂಸ್ಥೆಗಳಿಗೂ ಒಳ್ಳೆುಂ ಹೆಸರು ಬರುತ್ತದೆ ಎಂದು ಹೇಳಿದರು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಂಗೀತ, ನೃತ್ಯ ಹೀಗೆ ಯಾವುದಾದರೂ ಒಂದು ಕ್ಷೇತ್ರವನ್ನು ಆರಿಸಿಕೊಳ್ಳಬೇಕು. ಸಮುಂಕ್ಕೆ ಬಹಳ ಮಹತ್ವವಿದೆ. ಇರುವ ಸಮುಂವನ್ನು ಉಪೋಂಗಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ವಾಡಲು ಯತ್ನಿಸಬೇಕು ಎಂದು ಕಿವಿವಾತು ಹೇಳಿದರು.
ಒಂದು ಹಸುವಿಗೆ ಯಾವ ಆಹಾರ ನೀಡಿದರೂ ಸ್ವೀಕರಿಸುತ್ತದೆ. ಮಲಗಿದ ವೇಳೆ ಅದನ್ನು ಬಾಯಿಗೆ ತಂದುಕೊಂಡು ಮೆಲುಕು ಹಾಕುವ ಮೂಲಕ ಜೀರ್ಣಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಏನನ್ನು ಬೇಕಾದರೂ ಕಲಿಯುವ ಶಕ್ತಿ ಇರುತ್ತದೆ. ಹಸುವಿನ ರೀತಿುಂಲ್ಲಿ ಎಲ್ಲವನ್ನೂ ಸ್ವೀಕರಿಸಿ. ನಂತರ ಒಂದು ಕ್ಷೇತ್ರವನ್ನು ಆರಿಸಿಕೊಂಡು ಸಾಧನೆ ವಾಡಿ ಎಂದರು.

ಇದೇ ವೇಳೆ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ೭೫ನೇ ಜನ್ಮದಿನದ ಅಂಗವಾಗಿ ಕಾಲೇಜು ಆವರಣದಲ್ಲಿ ನೇತ್ರದಾನ ಶಿಬಿರ ಏರ್ಪಡಿಸಲಾಗಿತ್ತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ವಾಡಿಕೊಂಡರು. ರಕ್ತದಾನ ಶಿಬಿರದಲ್ಲಿ ೪೯ ವಿದ್ಯಾರ್ಥಿನಿುಂರು ರಕ್ತದಾನ ವಾಡಿದರು.

ಅಂತರ ಕಾಲೇಜು ಫೆಸ್ಟ್ ಅಂಗವಾಗಿ ಪಾಪ್ ಕ್ವಿಜ್, ಫೋಟೋಗ್ರಫಿ, ನೃತ್ಯ, ಪೇಂಟಿಂಗ್, ಹಾಡುಗಾರಿಕೆ, ಶಾರ್ಟ್ ಫಿಲಂ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮೈಸೂರು, ಮಂಡ್ಯ, ಕೊಳ್ಳೇಗಾಲ ಮುಂತಾದ ಕಡೆಗಳಿಂದ ೨೦ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಪಿಯುಸಿ ಕಾಲೇಜು ಪ್ರಾಂಶುಪಾಲರಾದ ಪ್ರೊ.ನುಂನಕುವಾರಿ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಪ್ರೊ.ಸಾಯಿನಾಥ್ ಮಲ್ಲಿಗೆವಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಲಕ್ಷ್ಮಿಜಿ. ಕಾವ, ಡಾ.ವಿನೋದ, ಹಾಜಿರಾ ಬೇಗಂ ಭಾಗವಹಿಸಿದ್ದರು.

 

 

 

Tags: