ಮೈಸೂರು: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವು ಇಂದು(ಜ.26) ಅದ್ದೂರಿಯಾಗಿ ಆರಂಭವಾಯಿತು.
ಮಹೋತ್ಸವಕ್ಕೆ ರೈತರು, ವಿದ್ಯಾರ್ಥಿಗಳು ಹಾಗೂ ಭಕ್ತರು ಹರಿದು ಬಂದರು.
ಪೂಜ್ಯ ಶ್ರೀಗಳು ಹಾಗೂ ವೇದಿಕೆ ಮೇಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಜಾತ್ರೆಯನ್ನು ಉದ್ಘಾಟಿಸಲಾಯಿತು.
ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣೆ ಶಿಬಿರ ಹಾಗೂ ದೋಣಿ ವಿಹಾರವನ್ನು ಶ್ರೀಗಳು ಹಾಗೂ ಗಣ್ಯರು ಉದ್ಘಾಟಿಸಿದರು.
ಸುತ್ರೂರು ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಜಾನಪದ ಕಲಾತಂಡಗಳೊಂದಿಗೆ ಸುತ್ತೂರು ಮಠದಿಂದ ಬೆಳಿಗ್ಗೆ ಕರೆತರಲಾಯಿತು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳು, ಶೋಭಾ ಕರಂದ್ಲಾಜೆ, ಎನ್ ಚಲುವರಾಯಸ್ವಾಮಿ ಹಾಗೂ ಆರ್ ಅಶೋಕ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.