Mysore
20
clear sky

Social Media

ಭಾನುವಾರ, 21 ಡಿಸೆಂಬರ್ 2025
Light
Dark

ವಿಶೇಷ ಉಡುಗೆ ತೊಟ್ಟು ಮಿಂಚಿದ ಚುನಾವಣಾ ಸಿಬ್ಬಂದಿ!

ಮೈಸೂರು : ನಂಜನಗೂಡು ತಾಲ್ಲೂಕಿನ ವಿಶೇಷ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ವಿಷಾಂಧಾರಿತ ಉಡುಗೆ ತೊಟ್ಟು ಕರ್ತವ್ಯಕ್ಕೆ ಹಾಜರಾಗಿ ಎಲ್ಲರ ಗಮನಸೆಳೆದರು.

ತಾಂಡವಪುರ, ಹುಲ್ಲಹಳ್ಳಿ ಯತ್ನಿಕ್ ಮತಗಟ್ಟೆುಯಲ್ಲಿ ಬಿಳಿ ಪಂಚೆ, ಬಿಳಿ ಶರ್ಟ್, ಶಲ್ಯ, ಮೈಸೂರು ಪೇಟ ತೊಟ್ಟಿದ್ದು ಸಖಿ ಮತಗಟ್ಟೆಗಳಲ್ಲಿ ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದರು.

ಬಂಕಹಳ್ಳಿಯ ಹಾಡಿ ಮತಗಟ್ಟೆಗಳಲ್ಲಿ ಪುಕ್ಕದ ಕಿರೀಟ, ನಡುವಿಗೆ ಸೊಪ್ಪಿನಿಂದ ಸುತ್ತಿಕೊಂಡು ಗಮನ ಸೆಳೆದರೆ, ಇತ್ತ ದೇವಿರಮ್ಮನಹಳ್ಳಿ ಪಾಳ್ಯದ  ಮತಗಟ್ಟೆಯಲ್ಲಿ ಸಿಬ್ಬಂದಿ ಗರಿ ಗರಿ ಕೋಟು ಧರಿಸಿ ಹಾಜರಿದ್ದರು.

ಸಿಂಧುವಳ್ಳಿ ಗ್ರಾಮ ಪಂಚಾಯಿತಿಯ ಕುರಹಟ್ಟಿ ಗ್ರಾಮದ ಸಖಿಮತಗಟ್ಟೆಗೆ ಸ್ವಸಹಾಯಕ ಸಂಘದ ಮಹಿಳೆಯರು ಪಿಂಕ್ ಸೀರೆ ಧರಿಸಿ ಹಕ್ಕು ಚಲಾಯಿಸಲು ಬಂದಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

 

Tags:
error: Content is protected !!