Mysore
17
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಕಬಿನಿಯಲ್ಲಿ 8 ವರ್ಷದ ಗಂಡು ಹುಲಿ ಸೆರೆ

ಎಚ್‌ಡಿ ಕೋಟೆ: ಎಚ್‌ಡಿ ಕೋಟೆ ತಾಲೂಕಿನ ಮಳಲಿ ಗ್ರಾಮದ ಕಬಿನಿ ಹಿನ್ನಿರಿನಲ್ಲಿ ಸುಮಾರು 8 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ.

ಕಬಿನಿ ಹಿನ್ನೀರಿನ ಡಿಸ್ಕವರಿ ವಿಲೇಜ್‌ ರೆಸಾರ್ಟ್‌ ಪಕ್ಕ ಶನಿವಾರ ಗಂಡು ಹುಲಿಯನ್ನು ಸೆರೆ ಹಿಡಿದಿದ್ದಾರೆ. ಹುಲಿಯು ಗ್ರಾಮದ ಅಕ್ಕಪಕ್ಕ ನಿನ್ನೆ ಮದ್ಯಾಹ್ನದಿಂದ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.

ಹುಲಿ ಸೆರೆಗೆ ಮುಂಜಾಗೃತ ಕ್ರಮವಾಗಿ ಅರಣ್ಯಾಧಿಕಾರಿಗಳು ಅರವಳಿಕೆ ಚುಚ್ಚು ಮದ್ದು ನೀಡಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 

Tags:
error: Content is protected !!