ಮೈಸೂರು : ಕಾಂಗ್ರೆಸ್ ಅಭ್ಯರ್ಥಿ ಯಾವಾಗ ಒಕ್ಕಲಿಗನಾದನೋ ನನಗಂತು ಗೊತ್ತಿಲ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಅವರಿಗೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.
ಬಿಜೆಪಿ ಮೈಸೂರು ಮಹಾನಗರ ಮತ್ತು ಗ್ರಾಮಾಂತರ ವತಿಯಿಂದ ಏರ್ಪಡಿಸಲಾಗಿದ್ದ ಹಿಂದುಳಿದ ವರ್ಗಗಳ ಮೋರ್ಚಾ ಸಾಮಾಜಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಮೈಸೂರು-ಲೋಕಸಭಾ ಅಭ್ಯರ್ಥಿ ಇಂದು ಜಾತಿಯ ಟಮಟೆ ಬಾರಿಸಿಕೊಂಡು ಓಡಾಡುತ್ತಿದ್ದಾನೆ. ನಮಗೆ ದೇಶ ಮುಖ್ಯವೆ ಹೊರತು ಜಾತಿ ಅಲ್ಲ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಭೆ ಸಮಾರಂಭದಲ್ಲಿ ಮಾತು ಮಾತಿಗೆ ಯಾವೆಲ್ಲಾ ಒಕ್ಕಲಿಗ ನಾಯಕರಿದ್ದಾರೋ ಎಲ್ಲರನ್ನು ಸದಾ ನಿಂದಿಸುವ ಕೆಲಸ ಮಾಡಿಕೊಂಡು ಬಂದಿದ್ದಾನೆ. ಈತ ಯಾವಾಗ ಒಕ್ಕಲಿಗನಾದನೋ ನನಗಂತೂ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.
ಇಂಥ ವ್ಯಕ್ತಿಗಳು ಬಂದು ಜಾತಿಯ ಟಮಟೆ ಬಾರಿಸುತ್ತಿದ್ದಾರೆ. ಯಾವುದೇ ಕಾರಣಕ್ಕು ಕಿವಿಕೊಡಬೇಡಿ. ನಮಗೆ ದೇಶ ಮುಖ್ಯ, ಮೈಸೂರಿನ ಅಭಿವೃದ್ದಿ ಮುಖ್ಯ. ಈ ಎಲ್ಲಾ ಕೆಲಸಗಳು ಬಿಜೆಪಿಯಿಂದ ಮಾತ್ರ ಮಾಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.