ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ನಟ ಡಾಲಿ ಧನಂಜಯ್ ಹಾಗೂ ಪತ್ನಿ ಧನ್ಯತಾ ಭೇಟಿ ನೀಡಿ, ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
ನಾಗರಹೊಳೆ ಅರಣ್ಯದಲ್ಲಿ ಸಫಾರಿ ಕೈಗೊಂಡಿದ್ದ ಧನಂಜಯ್ ಹಾಗೂ ಧನ್ಯತಾ ಅವರು, ಹುಲಿ, ಆನೆ, ಜಿಂಕೆ ಸೇರಿದಂತೆ ಅನೇಕ ಪಕ್ಷಿಗಳನ್ನ ಕಂಡು ಫುಲ್ ಖುಷ್ ಆಗಿದ್ದಾರೆ.
ಡಾಲಿ ಧನಂಜಯ ಇದ್ದ ಸಫಾರಿ ವಾಹನದ ಮುಂದೆಯೇ ಹುಲಿಯೊಂದು ಹಾದು ರಸ್ತೆ ಹೋಗಿದ್ದು, ಹುಲಿಯ ದೃಶ್ಯವನ್ನು ಡಾಲಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ತುಂತುರು ಮಳೆ ನಡುವೆ ನಾಗರಹೊಳೆ ಸಫಾರಿಯಲ್ಲಿ ಪ್ರಾಣಿಗಳನ್ನು ನೋಡಿ ಎಂಜಾಯ್ ಮಾಡಿದ ನವಜೋಡಿಗಳು, ಕಬಿನಿ ಹಿನ್ನೀರು ಪ್ರದೇಶದ ಸೌಂದರ್ಯ ಹಾಗೂ ಕಾಡಿನ ರಮಣೀಯ ದೃಶ್ಯವನ್ನು ಕಂಡು ಮನಸೋತಿದ್ದಾರೆ.





