ಮೈಸೂರು: ಜಿಲ್ಲೆಯ ಕೆ. ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಯುವನೋರ್ವ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಡಿಐಜಿ ಅಮಿತ್ ಸಿಂಗ್ ಸ್ಥಳ ಪರಿಶೀಲನೆ ನಡೆಸಿದರು.
ಇಂದು (ಗುರುವಾರ, ಮೇ.23) ಕೆ. ಸಾಲುಂಡಿ ಗ್ರಾಮಕ್ಕೆ ಖುದ್ದು ಭೇಟಿ ನೀಡಿದ ಡಿಐಜಿ ಅಮಿತ್ ಸಿಂಗ್ ಅವರು, ಗ್ರಾಮದಲ್ಲಿ ನೀರು ಸೋರಿಕೆ ಸ್ಥಳಕ್ಕೆ ಖುದ್ದು ಅವರೇ ವೀಕ್ಷಿಸಿದರು.
ಗ್ರಾಮದ ಪ್ರಮುಖ ನೀರು ಸರಬರಾಜು ಮಾಡುವ ಪೈಪ್ ಲೈನ್‌ಲ್ಲಿ ಸೋರಿಕೆ ಕಂಡು ಬಂದಿರುವುದನ್ನು ಗಮನಿಸಿದರು. ಉಳಿದಂತೆ ಎಲ್ಲಿಂದ ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರುತ್ತಿದೆ ಎಂಬುದನ್ನು ಗಮನಿಸಿದ್ದಾರೆ.
ಉಳಿದಂತೆ ಎಲ್ಲಾ ರೀತಿಯ ಕುಶಲೋಪಾಯಗಳನ್ನು ಗಮನಿಸಿ ಬಳಿಕ ಅಲ್ಲಿಂದ ತೆರಳಿದ್ದಾರೆ.