Mysore
25
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ : ಪ್ರೊ.ಭಗವಾನ್ ವಿರುದ್ಧ ಎಫ್​ಐಆರ್

ಮೈಸೂರು : ಒಕ್ಕಲಿಗರ ಬಗ್ಗೆ ಪ್ರೊ.ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಪ್ರೊ.ಭಗವಾನ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಗಂಗಾಧರ್ ಅವರು ನೀಡಿದ ದೂರಿನ ಆಧಾರದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಹಾಗೂ 153A ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಮತ್ತೊಂದೆಡೆ ಪ್ರೊ.ಭಗವಾನ್ ಬಂಧಿಸುವಂತೆ ರಾಜ್ಯ ಒಕ್ಕಲಿಗರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

ಪ್ರೊ.ಭಗವಾನ್ ಅವರು ಶ್ರೀರಾಮ ಹಾಗೂ ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಕೆಲವು ಹಿಂಬಾಲಕರನ್ನು ಖುಷಿಯಾಗಿಡಲು ಈ ರೀತಿ ಹೇಳಿಕೆ ನೀಡಿದ್ದಾರೆ. ಒಕ್ಕಲಿಗ ಸಮುದಾಯದ ವಿರುದ್ಧ ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆ. ಇದು ದೇಶದ ಸಹಬಾಳ್ವೆ ಒಗ್ಗಟ್ಟು‌ ಒಡೆಯುವ ಕೆಲಸ. ಅದಕ್ಕೆ ದೇಶದ್ರೋಹಿ ಪ್ರಕರಣ ದಾಖಲಿಸುವಂತೆ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಗಂಗಾಧರ್ ಅವರು ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಸದ್ಯ ಸೆಕ್ಷನ್ 153 ಅಡಿ ಗಲಾಟೆಗೆ ಪ್ರಚೋದನಕಾರಿಯಾಗುವಂತಹ ಭಾಷಣ. 153A ಎರಡು ಸಮುದಾಯದ ನಡುವೆ ಗಲಾಟೆ ಉಂಟು ಮಾಡುವುದು, ದ್ವೇಷ ಹೆಚ್ಚಿಸುವ ಆರೋಪದಡಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಎಫ್​ಐಆರ್ ದಾಖಲಾದ ಬೆನ್ನಲ್ಲೇ ಪ್ರೊ.ಭಗವಾನ್ ಬಂಧಿಸುವಂತೆ ರಾಜ್ಯ ಒಕ್ಕಲಿಗರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸದಸ್ಯರು, ಎಫ್​ಐಆರ್ ಆಗಿರುವುದು ಸ್ವಾಗತ. ಕೂಡಲೇ ಭಗವಾನ್ ವಿರುದ್ಧ ಕಾನೂನು ಕ್ರಮ ಆಗಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸುತ್ತೇವೆ. ಕುವೆಂಪು ಅವರು ಎಲ್ಲೂ ಭಗವಾನ್ ಹೇಳಿದ ರೀತಿ ಹೇಳಿಲ್ಲ. ಅವರು ಹೇಳಿರುವುದು ಕಾದಂಬರಿಯಲ್ಲಿ. ಕಾದಂಬರಿ ಕಾಲ್ಪನಿಕವಾದ ಒಂದು ಕಥೆ. ಭಗವಾನ್‌ಗೆ ನೀಡಿರುವ ಭದ್ರತೆ ವಾಪಸ್ಸು ಪಡೆಯಬೇಕು. ಭಗವಾನ್ ಅವರನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆಯಬಾರದು ಎಂದು ಒಕ್ಕಲಿಗರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!