Mysore
33
scattered clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಜನೌಷಧ ಕೇಂದ್ರ ಮುಚ್ಚದಿರಲು ಆಗ್ರಹ

Janaushadhi Kendra

ಮೈಸೂರು : ರಾಜ್ಯ ಕಾಂಗ್ರೆಸ್‌ ಸರ್ಕಾರ ಜನೌಷಧ ಕೇಂದ್ರ ತೆರವಿಗೆ ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಶಾಸಕ ಶ್ರೀವತ್ಸ ಹಾಗೂ ಮಾಜಿ ಶಾಸಕ ಎಲ್‌.ನಾಗೇಂದ್ರ ನೇತೃತ್ವದಲ್ಲಿ ನಗರದ ಕೆ.ಆರ್.ಆಸ್ಪತ್ರೆ ಮುಂಭಾಗ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಜನೌಷಧ ಕಡಿಮೆ ಬೆಲೆಗೆ ಸಿಗುತ್ತದೆ. ಜನೌಷಧ ಕೇಂದ್ರ ತೆಗೆದು ಹಾಕಬಾರದು. ಬಡವರಿಗೆ ನೀಡುವ ಔಷಧದಲ್ಲೂ ರಾಜಕಾರಣ ಸರಿಯಲ್ಲ. ಅದನ್ನ ಬಡವರು ಕೊಂಡುಕೊಳ್ಳುತ್ತಾರೆ. ಅಂತಹ ಬಡವರ ಮೇಲೂ ಕೂಡ ಕಾಂಗ್ರೆಸ್ ಗದಾಪ್ರಹಾರ ಮಾಡುತ್ತಿದೆ. ಜನೌಷಧ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿದರು.

Tags:
error: Content is protected !!