Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಸೈಬರ್‌ ಅಪರಾಧ : ಯುವ ಅಧಿಕಾರಿಗಳಿಗೆ ಭೇದಿಸುವ ಶಕ್ತಿ ಇರಲಿ

ಮೈಸೂರು: ಇತ್ತೀಚೆಗೆ ಹೆಚ್ಚಾಗುತ್ತಿರುವ  ಸೈಬರ್ ಅಪರಾಧಗಳನ್ನು ಪತ್ತೆಹಚ್ಚಿ ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಮಾದಯ್ಯ  ತಿಳಿಸಿದರು.

ಇಂದು(ಏ.2) ನಗರ ಶಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಏಕೀಕರಣದ ನಂತರ ಮೈಸೂರು ರಾಜ್ಯದಲ್ಲಿ ಪೊಲೀಸ್ ಧ್ವಜ ವಿಭಿನ್ನವಾಗಿದ್ದವು. ಅದನ್ನು ಮಾರ್ಪಡಿಸಿ 1960 ರಲ್ಲಿ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೊಳಿಸಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿ ಜಾರಿಗೊಳಿಸಲಾಯಿತು ಎಂದರು.

ಬೇರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಭಿನ್ನ. ಇಲ್ಲಿ ಕೆಲಸಕ್ಕೆ ನಿರ್ಧಿಷ್ಟ ಸಮಯ ಇರುವುದಿಲ್ಲ. ಎಲ್ಲಾ ಸಂದರ್ಭದಲ್ಲೂ ತಯಾರಿರಬೇಕು. ಆರೋಗ್ಯ ಸಮಸ್ಯೆಗಳೂ ಬೇಗ ಬರುತ್ತವೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುವ ರೀತಿ ಮುಖ್ಯ. ಈ ದಿನಗಳಲ್ಲಿ ರಾಜಕೀಯ ಗೊಂದಲ, ಸೈಬರ್ ಅಪರಾಧಗಳನ್ನು ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು. ನಿವೃತ್ತ ಅಧಿಕಾರಿಗಳ ಪಟ್ಟಿ ಠಾಣಾ ಮಟ್ಟದಲ್ಲಿ ನಿರ್ವಹಣೆ ಆಗಬೇಕು. ನಿವೃತ್ತರನ್ನು ಗೌರವಿಸಬೇಕು ಎಂದರು.

ಪ್ರಧಾನ ದಳಪತಿ ಸಹಾಯಕ ಕಮಾಂಡರ್ ರಾಜು.ಎಂ ತುಕಡಿಗಳ ಪರಿವೀಕ್ಷಣೆಗೆ ಕರೆದೊಯ್ದರು. ತೆರೆದ ವಾಹನದಲ್ಲಿ ಪರಿವೀಕ್ಷಣೆ ಮಾಡಲಾಯಿತು. ನಗರ, ಜಿಲ್ಲಾ ಶಸಸ್ತ್ರ ಮೀಸಲು ಪಡೆ, ನಗರ ನಾಗರಿಕ ಪೊಲೀಸ್, ಸಂಚಾರ ವಿಭಾಗ, ಅಶ್ವರೋಹಿ ದಳದಿಂದ 10 ತಂಡಗಳಿಂದ ಪಥಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ವಲಯದ ಐ.ಜಿ.ಪಿ ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ನಗರ ಡಿ ಸಿ ಪಿ ಮುತ್ತುರಾಜ್, ಎಸ್.ಜಾಹ್ನವಿ, ಎಡಿಎಸ್ಪಿ ನಾಗೇಶ್, ಕಮಾಂಡೆಂಟ್ ಶೈಲೇಂದ್ರ, ಕೆಪಿಎ ನಿರ್ದೇಶಕ ಚನ್ನಬಸವಣ್ಣ, ಸೆಸ್ಕಾಂ ನ ಎ ಎಸ್ಪಿ ಸವಿತಾ ಹೂಗಾರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:
error: Content is protected !!