Mysore
31
clear sky

Social Media

ಮಂಗಳವಾರ, 10 ಮಾರ್ಚ್ 2026
Light
Dark

ಸಿಡಿಮದ್ದು ಸ್ಪೋಟಗೊಂಡು ಮಹಿಳೆ ಮುಖ ಛಿದ್ರ

Crude Bomb Explosion Injures Woman’s Face

ಮೈಸೂರು : ಸಿಡಿಮದ್ದು ಸ್ಪೋಟಗೊಂಡು ಮಹಿಳೆಯ ಮುಖ ಛಿದ್ರವಾಗಿರುವ ಘಟನೆ ಹುಣಸೂರು ತಾಲೂಕಿನ ಹುಯಿಲಾಳು ಗ್ರಾಮದಲ್ಲಿ ನಡೆದಿದೆ.

ಕಮಲಮ್ಮ(55) ಗಂಭೀರವಾಗಿ ಗಾಯಗೊಂಡ ಮಹಿಳೆ. ಅಡಿಕೆಕಾಯಿ ಎಂದು ಭಾವಿಸಿ ಮಹಿಳೆ ಸಿಡಿಮದ್ದನ್ನು ಚೆಚ್ಚಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ತೋಟದಲ್ಲಿ ಬಿದ್ದಿದ್ದನ್ನು ಅಡಿಕೆಕಾಯಿ ಎಂದು ಭಾವಿಸಿದ ಮಹಿಳೆ ಚಚ್ಚಿದ್ದಾರೆ. ಈ ವೇಳೆ ಆ ಸಿಡಿಮದ್ದು ಸ್ಪೋಟಗೊಂಡಿದೆ.

ಕಾಡು ಹಂದಿಗಳ ಹಾವಳಿ ತಪ್ಪಿಸಲು ರೈತರು ಸಿಡಿಮದ್ದು ಇಟ್ಟಿದ್ದರು ಎನ್ನಲಾಗಿದೆ. ಈ ಸಿಡಿಮದ್ದನ್ನು ಅಡಿಕೆ ಎಂದು ಭಾವಿಸಿದ ಮಹಿಳೆ ಸುತ್ತಿಗೆಯಿಂದ ಚಚ್ಚಿದ್ದಾರೆ. ಈ ವೇಳೆ ಅದು ಛಿದ್ರಗೊಂಡು ಮುಖ, ಕೈಕಾಲು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ.

ಗಾಯಾಳು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tags:
error: Content is protected !!