ಮೈಸೂರು: ಉತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನ ನೀಡಿದ ದೀಪಾ ಅಕಾಡೆಮಿ ಬೆಂಗಳೂರು ತಂಡ ಬ್ಲೈಂಡ್ ಗರ್ಲ್ಸ್ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಆವೃತ್ತಿಯ ಹೆರಿಟೇಜ್ ಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಗರದ ಎಸ್‌ಜೆಸಿಇ ಕ್ಯಾಂಪಸ್‌ನಲ್ಲಿ ನಿರಮಯ ಫೌಂಡೇಶನ್, ಸ್ವಚ್ಛಂದ ಗುಂಪು ಮತ್ತು ಸುರಕ್ಷಾ ಫೌಂಡೇ ಶನ್ನಿನ ಸಹಯೋಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮೈಸೂರಿನ ನಿರಮಯ ತಂಡ ದ್ವಿತೀಯ ಸ್ಥಾನ ಪಡೆಯು ವಲ್ಲಿ ಯಶಸ್ವಿಯಾಯಿತು.
ಇದಕ್ಕೂ ಮುನ್ನ ಪಂದ್ಯಾವಳಿಗೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ಆದಿತ್ಯ ಆಸ್ಪತ್ರೆಯ ಡಾ.ಎನ್. ಚಂದ್ರಶೇಖರ, ಇಕ್ಯೂಲೈಸರ್‌ನ ಮುಖ್ಯಸ್ಥ ಭಾಸ್ಕರ್ ಕಳಲೆ, ಭಾರತೀಯ ಅಂಧ ಕ್ರಿಕೆಟರ್ ಲೋಕೇಶ್, ನಿರಮಯ ಫೌಂಡೇಶನ್ ಸಂಸ್ಥಾಪಕರಾದ ಆರ್.ರಕ್ಷಿತಾ, ಗುರುಪ್ರಿತ್ ಮತ್ತಿತರರು ಹಾಜರಿದ್ದರು. ಪಂದ್ಯ ದಲ್ಲಿ ನಿರಮಯ, ರಂಗರಾವ್ ಶಾಲೆ, ದೀಪಾ ಅಕಾಡೆಮಿ, ಸ್ನೇಹ ಅಕಾಡೆಮಿ ಮಹಿಳಾ ತಂಡಗಳು ಭಾಗವಹಿಸಿದ್ದವು.