Mysore
27
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ದಲಿತರ ಜಮೀನು ಕಬಳಿಸಲು ಸಂಚು : ದಸಂಸ ಆರೋಪ

Conspiracy to Grab Dalits' Land: Alleges DASAMSA

ಹುಣಸೂರು : ತಾಲ್ಲೂಕಿನ ಬಿಳಿಕೆರೆ ಹೋಬಳಿ, ಕಾಡುವಡ್ಡರಗುಡಿ ದೊಡ್ಡಕೊಪ್ಪಲು ಗ್ರಾಮದ ವೆಂಕಟರತ್ನ ಎಂಬವರ ಜಮೀನನ್ನು ಸವರ್ಣಿಯರ ಗುಂಪೊಂದು ಕಬಳಿಸಲು ಸಂಚು ರೂಪಿಸುತ್ತಿದೆ ಎಂದು ದಸಂಸ ಆರೋಪಿಸಿದೆ.

ಈ ಸಂಬಂಧ ದಸಂಸ ನಿಯೋಗವು ಬುಧವಾರ ಕಾಡುವಡ್ಡರಗುಡಿ ದೊಡ್ಡಕೊಪ್ಪಲು ಗ್ರಾಮದ ದಲಿತ ವೆಂಕಟರತ್ನ ರವರ ನಿವಾಸಕ್ಕೆ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿತು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ಮಾತನಾಡಿ, ಹೆಚ್.ಡಿ.ಕೋಟೆ ತಾಲ್ಲೂಕಿನ ಪಡುಕೋಟೆ ಕಾವಲ್ ಸರ್ವೆ ನಂಬರ್ ೧ರಲ್ಲಿ ೧.೧೦ ಗುಂಟೆ ವಿಸ್ತೀರ್ಣದ ಜಮೀನನ್ನು ೧೫ ವರ್ಷಗಳಿಂದಲೂ ಉಳುಮೆ ಮಾಡಿಕೊಂಡು ಸಾಗುವಳಿಗಾಗಿ ಫಾರಂ ನಂಬರ್ ೫೩ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಂಜೂರಾಗುವ ಹಂತದಲ್ಲಿದೆ. ಈ ಜಮೀನಿನಲ್ಲಿ ಪತ್ನಿ ಲಕ್ಷ್ಮಮ್ಮ ಅವರೊಂದಿಗೆ ವೆಂಕಟರತ್ನ ವಾಸವಾಗಿದ್ದಾರೆ. ಆದರೆ ತರಿಕಲ್ ದೊಡ್ಡಕೊಪ್ಪಲು ಗ್ರಾಮದ ಕೆಂಡಗಣ್ಣೇಗೌಡ, ರಘು ಎಂಬವರು ಇವರ ಜಮೀನನ್ನು ಕಬಳಿಸಲು ಹಾಗೂ ಈ ದಲಿತ ಕುಟುಂಬವನ್ನು ಒಕ್ಕಲೆಬ್ಬಿಸಲು ಹಲವು ದಿನಗಳಿಂದ ಭಯ ಹುಟ್ಟಿಸಿ ಸಂಚು ರೂಪಿಸಿದ್ದಾರೆ. ಈ ವಿಷಯವು ದಸಂಸ ಗಮನಕ್ಕೆ ಬಂದು ಕಂದಾಯ ಇಲಾಖೆ, ಪೊಲೀಸ್ ಇಲಾಖೆಗೆ ವೆಂಕಟರತ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಆದರೆ ದಲಿತ ಕುಟುಂಬಕ್ಕೆ ನಿರಂತರವಾಗಿ ಬೆದರಿಕೆ ನೀಡುತ್ತಾ ಕಿರುಕುಳ ಕೊಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನೊಂದ ದಲಿತ ವೆಂಕಟರತ್ನನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಹಿರಿಯ ಮುಖಂಡ ಬಸವಲಿಂಗಯ್ಯ, ದೇವೇಂದ್ರ ಕುಳುವಾಡಿ, ನಿವೃತ್ತ ಪ್ರಾಂಶುಪಾಲ ವೆಂಕಟೇಶಯ್ಯ, ದೊಡ್ಡಕೊಪ್ಪಲು ಗ್ರಾಮದ ಎಲ್. ಐ.ಸಿ ಸ್ವಾಮಿ, ಬಸಪ್ಪನ ಸ್ವಾಮಿ, ತ್ಯಾಗರಾಜು, ರಾಮೇಗೌಡ, ಮುಂತಾದವರು ಹಾಜರಿದ್ದರು.

Tags:
error: Content is protected !!