ಮೈಸೂರು: ಆಕ್ಸಿಜನ್ ಸೌಲಭ್ಯ ಇಲ್ಲದೇ ಸರ್ಕಾರಿ ಆಂಬುಲೆನ್ಸ್‌ನಲ್ಲಿ ಮಗು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ನಂಜನಗೂಡು ನಗರದ ರತ್ನಮ್ಮ ಹಾಗೂ ಕುಮಾರ್ ದಂಪತಿಯ ಮಗು ಸಾವನ್ನಪ್ಪಿದೆ.
ಮಾರ್ಚ್.17ರಂದು ರತ್ನಮ್ಮಗೆ ಹೆರಿಗೆಯಾಗಿದ್ದು, ಹೆರಿಗೆಯಾದ ಬಳಿಕ ಕ್ಷಣಾರ್ಧದಲ್ಲೇ ಮಗು ನೀಲಿ ಬಣ್ಣಕ್ಕೆ ತಿರುಗಿದೆ.
ಮಗುವಿನ ಸ್ಥಿತಿಗತಿ ನೋಡಿ ಮೈಸೂರಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಆಸ್ಪತ್ರೆ ಸಿಬ್ಬಂದಿ ಮುಂದಾಗಿದ್ದಾರೆ.
ಈ ವೇಳೆ ಅಲ್ಲಿಂದ ಮೈಸೂರಿನ ದೊಡ್ಡಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಮಗುವನ್ನು ರವಾನಿಸಲು ಮುಂದಾಗಿದ್ದಾರೆ. ಆಕ್ಸಿಜನ್ ಕೊರತೆ ಇದ್ದ ಹಿನ್ನೆಲೆಯಲ್ಲಿ ಮಗು ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದೆ.
ಮಗು ಸಾವನ್ನಪ್ಪುತ್ತಿದ್ದಂತೆ ರೊಚ್ಚಿಗೆದ್ದ ಪೋಷಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದು, ಮಗು ಸಾವಿಗೆ ನೀವೇ ಕಾರಣ ಎಂದು ಕಿಡಿಕಾರಿದ್ದಾರೆ.