ಪಿರಿಯಾಪಟ್ಟಣ: ಪ್ರವಾಸದ ಆಸೆ ತೋರಿಸಿ ವ್ಯಕ್ತಿಯೊಬ್ಬ ಗ್ರಾಹಕರಿಗೆ ಮೋಸ ಮಾಡಿದ್ದು, 5 ಲಕ್ಷಕ್ಕೂ ಅಧಿಕ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಪವನ್ ಪ್ರಭು ಎಂಬಾತನಿಂದ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪವನ್ ಪ್ರಭು, ಬೆಂಗಳೂರಿನ ಎಚ್ ಎಸ್ ಆರ್ ಬಡಾವಣೆಯಲ್ಲಿ ವಾಸವಿದ್ದನು ಎನ್ನಲಾಗಿದೆ.
ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ಜೊತೆ ನಂಟಿದೆ ಎಂದು ಹೇಳಿಕೊಂಡಿದ್ದು, ನಂಬಿಕೆ ಬರುವಂತೆ ನಟಿಸಿ 21 ಜನರಿಗೆ ಮೋಸ ಮಾಡಿದ್ದಾನೆ.
ಇದನ್ನೂ ಓದಿ:- ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು
ಪಿರಿಯಾಪಟ್ಟಣದಲ್ಲಿ 6, ಮೈಸೂರಿನಲ್ಲಿ 2, ಕೊಡಗು ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ಹಲವರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ದೂರು ನೀಡಿದರು ಪಿರಿಯಾಪಟ್ಟಣ ಪೊಲೀಸರು, ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿಕೊಳ್ಳುತ್ತಿದ್ದಾರೆ ಎಂದು ಜನತೆ ಗಂಭೀರ ಆರೋಪ ಮಾಡಿದ್ದು, ಹಣ ಕಳೆದುಕೊಂಡಿರುವವರು ಈಗ ಕಂಗಾಲಾಗಿದ್ದಾರೆ.




