ಮೈಸೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರ ರಾಜೇಂದ್ರರ ಅವರ ಹೇಳಿಕೆಗಳಿಂದ ರಾಜ್ಯ ಜನತೆಯ ದಾರಿ ತಪ್ಪಿಸುವ ಆಗುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.28) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೇ ಸದನದಲ್ಲಿ ರಾಜಣ್ಣನ ಮಗ ಪಕ್ಕದಲ್ಲೇ ಕುಳಿತಿದ್ದೆ. ಮೊದಲು ಕಾಂಗ್ರೆಸ್ ನಾಯಕರೇ ಹನಿಟ್ರ್ಯಾಪ್ ಅಂದರು. ಇದೀಗ ಮತ್ತೆ ಅವರೇ ಕೊಲೆ ಸುಫಾರಿ ಎಂದು ಹೇಳುತ್ತಿದ್ದಾರೆ. ಆದರೆ ಇದೆಲ್ಲವೂ ಕಿವಿಗೆ ಹೂ ಇಡುವ ಕೆಲಸ
ಹೈಕಮಾಂಡ್ ಸೂಚನೆ ನೀಡಿರಬೇಕು. ಹಾಗಾಗಿ ಜನರ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಅವರೇ ಹನಿಟ್ರ್ಯಾಪ್ ಹಿಂದೆ ಯಾರಿದ್ದಾರೆಂದು ಜನರಿಗೆ ಹೇಳಬೇಕು ಎಂದರು.
ಹಗ್ಗ ಹಿಡಿದು ಆಟ ಆಡಿಸುತ್ತಿರೋದು ಯಾರೆಂದು ರಾಜ್ಯದ ಜನತೆಗೆ ಗೊತ್ತಾಗಬೇಕು. ಸಿಡಿ ಫ್ಯಾಕ್ಟರಿ, ಪೆನ್ ಡ್ರೈವ್ ಫ್ಯಾಕ್ಟರಿ ಯಾರದ, ರಮೇಶ್ ಜಾರಕಿಹೊಳಿ ಕೂಡ ಈ ಹಿಂದೆ ಯಾರೋ ಮಹಾನ್ ನಾಯಕರು ಇದ್ದಾರೆಂದು ಹೇಳಿದ್ದರು. ಈಗಲೂ ಆ ಮಹಾನ್ ನಾಯಕರು ಇದ್ದಾರೆಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ
ಈ ಪ್ರಕರಣದಿಂದ ರಾಜ್ಯದ ಘನತೆಯ ಹೆಸರರು ಹಾಗೂ ಮಾನ ಮರ್ಯಾದೆ ಹೋಗುತ್ತಿದೆ ಎಂದು ಹೇಳಿದರು.