ಮೈಸೂರು : ಬೆಳ್ಳಂಬೆಳಗ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯನಿರತ ಪೌರ ಕಾರ್ಮಿಕನಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಡೆದಿದೆ. ಮಹದೇವ (36) ಅಪಘಾತದಲ್ಲಿ ಗಾಯಗೊಂಡ ಪೌರ ಕಾರ್ಮಿಕ. ಅತಿ ವೇಗದೊಂದಿಗೆ ಚಾಲಕನ ಮೊಬೈಲ್ ಬಳಕೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಅಪಘಾತದಲ್ಲಿ ಪೌರಕಾರ್ಮಿಕನ ಕಾಲಿನ ಪಾದ ಬೇರ್ಪಟ್ಟಿದ್ದು, ಗಾಯಾಳು ಮಹದೇವ್‌ಗೆ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರು ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.