ಮೈಸೂರು : ವಿವಿಧ ಜಯಂತಿಗಳಿಗೆ ನೀಡುವ ಸಾರ್ವತ್ರಿಕ ರಜೆ ರದ್ದುಗೊಳಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡರು ಆಗ್ರಹಿಸಿದ್ದಾರೆ.
ನಗರದ ಕಲಾಮಂದಿರದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಜಿಲ್ಲಾಡಳಿತ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ನಾಡಪ್ರಭುಗಳ ಬಗ್ಗೆ ಮಾತನಾಡುವ ವೇಳೆ ಈಗಾಗಲೇ ಸರ್ಕಾರಿ ರಜೆಗಳು ಸಾಕಷ್ಟು ಕೊಡಲಾಗಿದೆ. ಇದರ ಜತೆಗೆ ವಿವಿಧ ಜಯಂತಿಗಳ ರಜೆಯಿಂದ ಸರ್ಕಾರಿ ಕಚೇರಿಗಳಲ್ಲಿ ಸರಿಯಾಗಿ ಜನರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದೇ ರೀತಿಯಾದ್ರೆ ಜನರ ಸಮಸ್ಯೆಗಳನ್ನು ಆಲಿಸುವುದು ಯಾವಾಗ..? ಬಗೆಹರಿಸುವುದು ಯಾವಾಗ..? ಜಯಂತಿಯನ್ನು ಬೇಕಿದ್ರೆ ಮಧ್ಯಾಹ್ನದವರೆಗೆ ಆಚರಿಸಿ ನಂತರ ಕೆಲಸದಲ್ಲಿ ತೊಡಗುವಂತೆ ಮಾಡಬೇಕು, ಆಗ ಜನರ ಕೆಲಸ ಕಾರ್ಯಗಳು ಕೂಡ ಬೇಗ ಆಗುತ್ತದೆ ಎಂದು ಹೇಳಿದರು.