Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಿಜೆಪಿ ನಮ್ಮ ಸಮುದಾಯಕ್ಕೆ ಕೈಹಾಕಿ ತೊಂದರೆ ಕೊಟ್ಟಿದೆ- ಈ ಸರ್ಕಾರವನ್ನು ಕಿತ್ತೊಗೆಯಬೇಕು : ಅಬ್ದುಲ್ ಜಬ್ಬಾರ್

ಮೈಸೂರು: ಕಳೆದ ೧೦ ವರ್ಷದ ಅವಧಿಯಲ್ಲಿ ನಮ್ಮ ಸಮುದಾಯದ ವೈಯಕ್ತಿಕ ವಿಚಾರಕ್ಕೂ ಬಿಜೆಪಿ ಕೈಹಾಕಿ ತೊಂದರೆ ಕೋಟ್ಟಿದೆ. ಇಂತಹ ದುಷ್ಟ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾದ್ಯಕ್ಷ ಅಬ್ದುಲ್ ಜಬ್ಬಾರ್ ಹೇಳಿದರು.

ಬುಧವಾರ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜಲ್ಲಾ ಅಲ್ಪಸಂಖ್ಯಾತ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಮುಸ್ಲಿಂ ಮುಖಂಡರ ಸಭೆ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸವಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ನಮ್ಮನ್ನು ವಿನಾಕಾರಣ ದೂಷಿಸುತ್ತದೆ. ಮುಸ್ಲಿಂ, ಪಾಕಿಸ್ತಾನ ಎಂದು ತಳುಕು ಹಾಕುವುದನ್ನೇ ಮಂತ್ರವಾಗಿಸಿಕೊಂಡಿದೆ. ನಮ್ಮಲ್ಲಿ ಒಗ್ಗಟ್ಟು ಮೂಡಿದಲ್ಲಿ ಈ ಸರ್ಕಾರವನ್ನು ಕಿತ್ತೊಗೆಯಬಹುದು. ಇಲ್ಲವಾದಲ್ಲಿ ಮುಂದಿನ ದಿನಗಳು ಕಷ್ಟಕರವಾಗಲಿದೆ ಎಂದರು.

ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿಯೋಜನೆಗಳಿಂದ ಎಲ್ಲ ಸಮುದಾಯದವರಿಗೂ ಒಳ್ಳೆಯದಾಗಿದೆ. ನಮ್ಮ ಸಮುದಾಯದವರು ಹೆಚ್ಚು ಬಳಸಿಕೊಂಡಿದ್ದಾರೆ. ಮುಂದೆ ಕೂಡ ರೈತರ ಸಾಲ ಮನ್ನ, ಮಹಾಲಕ್ಷಿ ಮುಂತಾದಂತಹ  ಕೇಂದ್ರದ ಗ್ಯಾರಂಟಿ  ಯೋಜನೆಗಳು ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದರು.

ಹೀಗಾಗಿ ಏ.೨೬ ರಂದು ಬೆಳಿಗ್ಗೆ ನವಾಝ್ ಮಾಡಿ ಇಡೀ ಕುಟುಂಬದವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ಬ್ರಿಟೀಷರ ಆಳ್ವಿಕೆ ವೇಳೆ ನಡೆದ ಸ್ವಾತಂತ್ರ್ಯ ಹೋರಾಟದದಲ್ಲಿ ಸಾಕಷ್ಟು ತ್ಯಾಗ ಬಲಿದಾನ ನಡೆದಿದೆ. ಇದೀಗ ಬಿಜೆಪಿಯಂತಹ ದುಷ್ಟ ಸರ್ಕಾರವನ್ನು ಓಡಿಸಲು ಅಂತಹುದ್ದೇ ಹೋರಾಟ, ತ್ಯಾಗವನ್ನು ಮಾಡಬೇಕಿದೆ. ನಮ್ಮಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿರಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಸ್ವಾಭಿಮಾನದ ಹೋರಾಟವನ್ನು ಮಾಡಬೇಕು ಎಂದು ಕರೆನೀಡಿದರು.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಈ ದೇಶದಲ್ಲಿ ಬದುಕುತ್ತಿರುವ ಎಲ್ಲರು ಕೂಡ ಭಾರತೀಯರೆ, ಹಿಂದುಗಳು, ಅಲ್ಪಸಂಖ್ಯಾತರು ಎಂಬ ಬೇದಭಾವವನ್ನು ಕಂಡರೂ ಕೂಡ ಮಾಡಬಾರದು. ಇದು ಸ್ವಾಸ್ಥತ್ಯೃ ಸವಾಜಕ್ಕೆ ಅಪಾಯ ಎಂದು ಹೇಳಿದರು.

೫ ವರ್ಷಗಳಿಗೆ ಒಮ್ಮೆ ಚುನಾವಣೆ ಬರುತ್ತದೆ. ಈ ವೇಳೆ ನಾವು ಎಚ್ಚರಿಕೆಯಿಂದ ಮತದಾನ ಮಾಡಬೇಕು. ಹಿಂದು, ಮುಸ್ಲಿಂ ಎಂಬ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗುವ ಮೂಲಕ ನರೇಂದ್ರಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೆಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌, ಸಮಯದ ಅಭಾವದಿಂದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷತ್ಮಣ್ ಅವರು ಎಲ್ಲರನ್ನೂ ತಲುಪಲು ಸಾಧ್ಯವಾಗುವುದಿಲ್ಲ. ಹೀಗಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಿರಂತರ ಸಭೆಗಳನ್ನು ನಡೆಸಿ ಎಂಬ ಸೂಚನೆ ಬಂದಿದೆ. ಅದರಂತೆ ಇಂದು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ನಡೆಸಲಾಗಿದೆ ಎಂದರು.

ಇದೇ ವೇಳೆ ಜಿಲ್ಲಾ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮೋಸಿನ್ ಖಾನ್ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ರಾಜ್ಯ ಅಲ್ಪಸಂಖ್ಯಾತರ ಘಟಕದ ಸಿರಾಜ್, ಜಾವೆದ್ ಪಾಷಾ, ವಾಸೀಂ, ತಿಮ್ಮರಾಜು, ಮಾಜಿ ಮಹಾಪೌರ ಆಯೂಬ್‌ ಖಾನ್, ಆರೀಫ್‌ಹುಸೇನ್, ಅಸ್ರತುಲ್ಲ, ಶಿವನಾಗಪ್ಪ, ಅಕ್ಬರ್ ಅಲಿ, ಶೌಕತ್ ಪಾಷಾ, ಸಿದ್ದಪ್ಪ, ಷಫಿ, ನಜರಬಾದ್ ನಟರಾಜ್, ಈಶ್ವರ ಚಕ್ಕಡಿ ಮುಂತಾದವರು ಉಪಸ್ಥಿತರಿದ್ದರು.

Tags: