ಪಿರಿಯಾಪಟ್ಟಣ: ಮರಿಯಾನೆಯೊಂದು ಹಿಂಡಿನಿಂದ ತಪ್ಪಿಸಿಕೊಂಡು ರೋಧನೆ ಅನುಭವಿಸುತ್ತಿರುವ ಘಟನೆ ಪಿರಿಯಾಪಟ್ಟಣದ ಕೋಗಿಲವಾಡಿ ಗ್ರಾಮದ ಬಳಿ ಜರುಗಿದೆ.
ಆನೆಗಳ ಹಿಂಡಿನೊಂದಿಗೆ ಬಂದಿದ್ದ ಗಂಡು ಆನೆ ಮರಿಯೊಂದು ಹಾಡಿಯ ಜನರಿಗೆ ವಿದ್ಯುತ್ ಅಳವಡಿಸಲು ತೆಗೆದಿದ್ದ ಟ್ರೆಂಚ್‌ನಲ್ಲಿ ಬಿದ್ದಿದೆ. ಬೆಳಗಿನ ಜಾವ ಆನೆಗಳ ಹಿಂಡು, ಕಾಡಿನ ಒಳಗಡೆ ಹೋಗಿರುವ ಕಾರಣ ಮರಿಯಾನೆ ತಾಯಿ ಆನೆಯನ್ನು ಹುಡುಕಿ ಹುಡುಕಿ ರೋಧಿಸುತ್ತಿದೆ.
ಇದನ್ನೂ ಓದಿ:- ವಿಮಾನ ದುರಂತ ಪ್ರಕರಣ: ಸಾವಿನ ಸಂಖ್ಯೆ 265ಕ್ಕೆ ಏರಿಕೆ
ಆನೆಯ ಚೀರಾಟವನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಯನ್ನು ರಕ್ಷಿಸಿ ಕ್ಯಾಂಪಿನ ಬಳಿ ಕಟ್ಟಿಹಾಕಿದ್ದಾರೆ. ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಮರಿಯಾನೆ ರೋಧನೆ ಎಲ್ಲರ ಮನಕಲಕುವಂತಿದ್ದು, ಸಂಜೆಯ ವೇಳೆಗಾದರೂ ಮರಿಯಾನೆ ತಾಯಿಯ ಬಳಿ ಸೇರಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.




