Mysore
32
scattered clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಜಮೀನಿನಲ್ಲಿ ಹೆಜ್ಜೇನು ದಾಳಿಗೆ ಸಿಲುಕಿ ರೈತ ಬಲಿ

ಮೈಸೂರು: ಹೆಜ್ಜೇನು ದಾಳಿಗೆ ಸಿಲುಕಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಮೇಲೂರು ಗ್ರಾಮದಲ್ಲಿ ನಡೆದಿದೆ.

ಪುಟ್ಟರಾಜು ಎಂಬುವವರೇ ಹೆಜ್ಜೇನು ದಾಳಿಗೆ ಸಿಲುಕಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಪುಟ್ಟರಾಜು ಅವರು ದನ ಮೇಯಿಸಲು ಜಮೀನಿಗೆ ಹೋದಾಗ ಜೇನುನೊಣಗಳು ದಾಳಿ ನಡೆದಿವೆ. ಈ ವೇಳೆ ಅವರಿಗೆ ಓಡಿ ಹೋಗಲು ಸಾಧ್ಯವಾಗಿಲ್ಲ.

ಪುಟ್ಟರಾಜು ಅವರ ಕೂಗಾಟದಿಂದ ರಕ್ಷಣೆಗೆ ಧಾವಿಸಿದ ಸಹೋದರ ಪುಟ್ಟರಾಜು ಹಾಗೂ ಅವರ ಸಂಬಂಧಿ ಮಲ್ಲಿಕಾರ್ಜುನ ಎಂಬುವವರಿಗೂ ಸಹ ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗಳಾಗಿವೆ.

ಮೂವರನ್ನು ಪಿರಿಯಾಪಟ್ಟಣ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪುಟ್ಟರಾಜು ಮೃತಪಟ್ಟಿದ್ದಾರೆ. ಈ ಸಂಬಂಧ ಬೆಟ್ಟದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!