Mysore
24
broken clouds

Social Media

ಗುರುವಾರ, 12 ಡಿಸೆಂಬರ್ 2024
Light
Dark

ಮತ್ತೊಮ್ಮೆ ಮೋದಿಗಾಗಿ ʼಭಾರತ್‌ ಬಚಾವೋʼ ಸೈಕಲ್‌ ಯಾತ್ರೆ

ಮೈಸೂರು: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಧಾರವಾಡ ಮೂಲದ ಯುವಕ ಭರತ್ ತವನೂರ ಸಾವಿರಾರು ಕಿಮೀ ‘ಭಾರತ್ ಬಚಾವೋ‘ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.

೩೪ ವರ್ಷದ ಯುವಕ ಭರತ್, ಧಾರವಾಡ ಜಿಲ್ಲೆಯ ಕಾಲೇಜಿನಲ್ಲಿ ಪಿಯುಸಿ ಮಾಡಿದ್ದು, ಫೆ.೧೮ ರಂದು ಪ್ರಾರಂಭ ಮಾಡಿದ ಬೆಳಗಾವಿಯಿಂದ ಸೈಕಲ್ ಯಾತ್ರೆ ಪ್ರಾರಂಭಿಸಿ ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ದಾವಣಗೆರೆ,ಚಿತ್ರದುರ್ಗ, ತುಮಕೂರು, ಬೆಂಗಳೂರು, ಉತ್ತರ, ದಕ್ಷಿಣ, ಚಿಕ್ಕಬಳ್ಳಾಪುರ ಮೂಲಕ ಇದೀಗ ಸುವಾರು ೨೨೦೦ ಕಿಮೀ ಕ್ರಮಿಸಿ ಮೈಸೂರಿಗೆ ಆಗಮಿಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಗೆ ಆಗಮಿಸಿದ ಭರತ್ ಅವರನ್ನು ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮೈಸೂರು ನಗರ ಉಪಾಧ್ಯಕ್ಷ ಜೋಗಿ ಮಂಜು, ಕೆ.ಅರ್.ಕ್ಷೇತ್ರ ಯುವಮೊರ್ಚಾ ಅಧ್ಯಕ್ಷ ನಿಶಾಂತ್, ಕಿಶೋರ್,ಮಣಿರತ್ನಂ ರವರು ಸ್ವಾಗತಿಸಿದರು.

Tags: