ಮೈಸೂರು: ಮುಡಾಗೆ ಸೇರಿದ ಜಾಗವನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದ ಸಿಎಂ ಪತ್ನಿ ಪಾರ್ವತಿ ಅವರು ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ವಾಪಸ್ ಕೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಗಂಗರಾಜು ಆರೋಪಿಸಿದರು.
ಮುಡಾ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾಗೆ ಸೇರಿದ ೭ ಗುಂಟೆ ಜಾಗವನ್ನು ೨೦೨೩ರ ಸೆಪ್ಟೆಂಬರ್ ೨೯ರಂದು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಕೆಆರ್‌ಎಸ್ ರಸ್ತೆಯಲ್ಲಿರುವ ಸರ್ವೆ ನಂಬರ್ ೪೫೪ರ ಜಾಗದಲ್ಲಿ ಗಣೇಶ್ ದೀಕ್ಷಿತ್ ಎಂಬವರಿಗೆ ೪.೧೧ ಎಕರೆ ಜಾಗವಿತ್ತು. ಅದರಲ್ಲಿ ೨೦ ಗುಂಟೆ ಜಾಗ ವನ್ನು ಖರೀದಿ ಮಾಡಿದ್ದರು. ೨೦ ಗುಂಟೆ ಜಾಗ ವನ್ನು ೧.೮೫ ಕೋಟಿ ರೂ. ಕೊಟ್ಟು ಖರೀದಿಸಿದ್ದರು. ತಮ್ಮ ಜಮೀನಿನಲ್ಲಿ ೮,೯೯೮ ಚದರ ಅಡಿ ಜಾಗವನ್ನು ರಸ್ತೆ ಮತ್ತು ಪೈಪ್‌ಲೈನ್‌ಗೆ ಬಿಟ್ಟುಕೊಟ್ಟಿದ್ದರು. ಆದರೆ, ಪಾರ್ವತಿ ಅವರು ತಮ್ಮ ಹೆಸರಿಗೆ ರಸ್ತೆ, ಪೈಲ್‌ಲೈನ್ ಜಾಗವನ್ನು ಸೇರಿಸಿಕೊಂಡು ಕ್ರಯ ಮಾಡಿಕೊಂಡಿದ್ದರು ಎಂದು ದಾಖಲೆ ಬಹಿರಂಗಪಡಿಸಿದರು.