Mysore
20
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಮನೆಯಿಂದ ಹೊರಹಾಕಿದ ಅಣ್ಣ; ನೇಣಿಗೆ ಶರಣಾದ ತಮ್ಮ

ಮೈಸೂರು: ಅಣ್ಣ ತಮ್ಮನ ನಡುವೆ ಜಗಳ ನಡೆದು ಅಣ್ಣ ಮನೆಯಿಂದ ಹೊರಹಾಕಿದ್ದಕ್ಕೆ ಬೇಸತ್ತ ತಮ್ಮ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಅಹಲ್ಯ ಗ್ರಾಮದಲ್ಲಿ ನಡೆದಿದೆ.

ಸಿದ್ದರಾಜು(32)ಮೃತಪಟ್ಟ ಸಹೋದರ. ವಿದ್ಯುತ್‌ ಬಿಲ್‌ ವಿಚಾರಕ್ಕೆ ಅಣ್ಣ ತಮ್ಮನ ನಡುವೆ ಜಗಳವಾಗಿದ್ದು, ಈ ವೇಳೆ ತಮ್ಮ ಸಿದ್ದರಾಜು ಮೇಲೆ ಹಲ್ಲೇ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ ಎನ್ನಲಾಗಿದೆ.

ಹೀಗಾಗಿ, ಬೇಸತ್ತ ತಮ್ಮ ಗ್ರಾಮದ ಹೊರ ವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಜಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: