ಮೈಸೂರು : ನಗರದ ಶ್ರೀರಾಂಪುರ-ಪರಸಯ್ಯನಹುಂಡಿಯಲ್ಲಿರುವ ಬಂಜಾರ ಭವನದಲ್ಲಿ ಬಂಜಾರ ಸಮುದಾಯದ ಶ್ರೀ ಸೇವಾಲಾಲ್ ಸ್ವ ಸಹಾಯ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜಯಂತಿಯನ್ನು ಆಚರಿಸಲಾಯಿತು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಟಿ.ನಾಗವೇಣಿ, ಸಂಘದ ಅಧ್ಯಕ್ಷ ಚಂದ್ರಪ್ರಕಾಶ್ ಮೇಘಾವತ್, ಉಪಾಧ್ಯಕ್ಷ ರಾಜೇಶ್ ನಾಯ್ಕ್, ಕಾರ್ಯದರ್ಶಿ ಸಿದ್ದು ನಾಯ್ಕ್ ಹಾಗೂ ಸದಸ್ಯರು ಚಿತ್ರದಲ್ಲಿದ್ದಾರೆ.