Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅಂಬಾರಿ ಹಸ್ತಾಂತರ ವಿಳಂಬ ಆರೋಪ; ಪ್ರಮೋದಾದೇವಿ ಸ್ಪಷ್ಟನೆ

ಮೈಸೂರು: ಶನಿವಾರ ಇಲ್ಲಿ ನಡೆದ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಗಾಗಿ ಚಿನ್ನದ ಅಂಬಾರಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವಲ್ಲಿ ನಮ್ಮಿಂದ ವಿಳಂಬವಾಗಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಭಾನುವಾರ ಮಾದ್ಯಮ ಪ್ರಕಟಣೆ ನೀಡಿರುವ ಅವರು, ಮೆರವಣಿಗೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅಂದರೆ ಮಧ್ಯಾಹ್ನ 2.05ಕ್ಕೆ ಅಂಬಾರಿ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂಬಾರಿಯು 2.05ಕ್ಕೆ ದೊರೆತ ಬಗ್ಗೆ ಅರಮನೆ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್ ಅವರು ಅರಮನೆ ಭದ್ರತಾ ಪಡೆಯ ಎಸಿಪಿ ಚಂದ್ರಶೇಖರ್ ಅವರಿಂದ ಸ್ವೀಕೃತಿ ಪಡೆದಿರುವ ಪ್ರತಿಯನ್ನೂ ಪ್ರಕಟಣೆಯೊಂದಿಗೆ ಲಗತ್ತಿಸಿ, ಮೆರವಣಿಗೆಯ ಸಂದರ್ಭದಲ್ಲಿ ಅಭಿಮನ್ಯು ಆನೆಯು ಚಿನ್ನದ ಅಂಬಾರಿಯನ್ನು ಸಾಗಿಸುವಲ್ಲಿ ಹಾಗೂ ಮುಹೂರ್ತದೊಳಗೆ ಪುಷ್ಪಾರ್ಪಣೆ ಮಾಡಲು ಆಗಿರುವ ವಿಳಂಬಕ್ಕೆ ನಾವು ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಲ್ಲವನ್ನೂ ಸೂಕ್ಷ್ಮವಾಗಿ ನಿರ್ವಹಿಸಲು, ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಮತ್ತು ಅಂಬಾರಿ ಸಿದ್ಧವಾಗಿದ್ದರೂ, ಅದನ್ನು ಸ್ಥಳಾಂತರಿಸಲು ಸಂಬಂಧಿಸಿದ ಸಿಬ್ಬಂದಿಗೆ ತೊಂದರೆಯಾಯಿತು. ಜನಸಂದಣಿಯ ಕಳಪೆ ನಿರ್ವಹಣೆಯೂ ಇಲ್ಲಿ ಇಲ್ಲಿ ಇತ್ತು. ಕೆಲವು ಸರ್ಕಾರಿ ಕಾರು ಮತ್ತು ಸರ್ಕಾರಿ ಅತಿಥಿಗಳು ಹಾಗೂ ಪಾಲ್ಗೊಳ್ಳುವವರನ್ನು ಕರೆತಂದ ಖಾಸಗಿ ಬಸ್ ಅಂಬಾರಿ ಸಾಗುವ ಮಾರ್ಗದಲ್ಲಿ ನಿಲುಗಡೆ ಮಾಡಿದ್ದರಿಂದ ತೊಂದರೆಯಾಯಿತು ಎಂದಿದ್ದಾರೆ.

ಅಂಬಾರಿ ಹಸ್ತಾಂತರದ ಸಮಯದ ಬಗ್ಗೆ ಉಂಟಾಗಿರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಲು ಈ ಹೇಳಿಕೆ ನೀಡಿದ್ದೇನೆ. ಇದರಲ್ಲಿ ಯಾವುದೇ ಅಪರಾಧವಾಗಿಲ್ಲ ಎಂದು ಹೇಳಿದ್ದಾರೆ.

 

 

Tags: