Mysore
24
overcast clouds

Social Media

ಸೋಮವಾರ, 30 ಮಾರ್ಚ್ 2026
Light
Dark

ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ನಟ ಸುದೀಪ ದಂಪತಿ

ಮೈಸೂರು: ನಟ ಕಿಚ್ಚ ಸುದೀಪ ಅವರು ತಮ್ಮ ಪತ್ನಿ ಪ್ರಿಯಾ ಹಾಗೂ ಸಿಸಿಎಲ್‌ ತಂಡದ ಕ್ರಿಕೆಟ್‌ ಆಟಗಾರರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸ್ಟೇಡಿಯಂನಲ್ಲಿ ನಾಳೆ(ಮಾರ್ಚ್‌.1) ಸಿಸಿಎಲ್‌ ಕ್ರಿಕೆಟ್‌ ಮ್ಯಾಚ್‌ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಹಾಗೂ ಕರ್ನಾಟಕ ಬೂಲ್ಡೋರ್ಜಸ್‌ ತಂಡದೊಂದಿಗೆ ಇಂದು(ಫೆಬ್ರವರಿ.28) ತಾಯಿ ಚಾಮುಂಡೇಶ್ವರಿ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ನಾಳೆ ಸಂಜೆ 7 ಗಂಟೆಗೆ ನಡೆಯುವ ಸಿಸಿಎಲ್‌ ಪಂದ್ಯಾವಳಿಯಲ್ಲಿ ಕರ್ನಾಟಕ ಬೂಲ್ಡೋರ್ಜಸ್‌ ಹಾಗೂ ಚೆನ್ನೈ ತಂಡ ಮುಖಾಮುಖಿಯಾಗಲಿದೆ.

Tags:
error: Content is protected !!