ಮೈಸೂರು : ಬಹುಭಾಷಾ ನಟ ಪ್ರಭುದೇವ ಅವರ ಅಜ್ಜಿ ಪುಟ್ಟಮಣ್ಣಿ ವಯೋಸಹಜ ಕಾಯಿಲೆಯಿಂದ ನಿನ್ನೆ ವಿಧಿವಶರಾಗಿದ್ದಾರೆ. ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಹೋದರರ ಜೊತೆ ಪ್ರಭುದೇವ ಚೆನ್ನೈನಿಂದ ಮೈಸೂರಿಗೆ ಆಗಮಿಸಿದ್ದಾರೆ.
೯೭ ವರ್ಷ ಪುಟ್ಟಮಣ್ಣಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪುಟ್ಟಮಣ್ಣಿ ಅವರು ಪ್ರಭುದೇವ ತಾಯಿ ಮಹಾದೇವಮ್ಮ ಅವರ ತಾಯಿ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೂರ ಗ್ರಾಮದಲ್ಲಿ ಪ್ರಭುದೇವ ಅಜ್ಜಿ ನಿಧನರಾಗಿದ್ದು, ಅವರ ನಿಧನದಿಂದ ಕುಟುಂಬಕ್ಕೆ ಆಘಾತವಾಗಿದೆ. ಇನ್ನು ಇಂದು ಸಂಜೆ ದೂರ ಗ್ರಾಮದಲ್ಲೇ ವಿಧಿವಿಧಾನದಂತೆ ಪುಟ್ಟಮಣ್ಣಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆಗೂ ಮುನ್ನ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.