Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಬಸ್-ಬೈಕ್ ನಡುವೆ ಅಪಘಾತ : ಇಬ್ಬರು ಸಾವು, ಮಹಿಳೆ ಗಂಭೀರ

accident (1)

ನಂಜನಗೂಡು : ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ನಂಜನಗೂಡಿನ ಚಾಮುಂಡಿ ಟೌನ್‌ಶಿಪ್ ಬಳಿ ನಡೆದಿದೆ.

ಶಿವಮೂರ್ತಿ ಹಾಗೂ ಸಿದ್ದಾರ್ಥ ಎಂಬುವವರೆ ಮೃತಪಟ್ಟವರು. ಇನ್ನೂ ಚೆನ್ನಾಜ್ಜಮ್ಮ ಎಂಬುವವರಿಗೆ ಗಂಭೀರ ಗಾಯಗಳಾಗಿದೆ‌.

ಇದನ್ನು ಓದಿ: ಗೂಡ್ಸ್‌ ವಾಹನ-ಬೈಕ್‌ ನಡುವೆ ಅಪಘಾತ : ಯುವಕ ಸಾವು

ಗಾಯಾಳುವನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌. ಮೃತರು ಚಾಮರಾಜನಗರದ ಉದ್ದನೂರು ಗ್ರಾಮದ ನಿವಾಸಿಗಳು ಎಂಬ ಮಾಹಿತಿ ಲಭ್ಯವಾಗಿದ್ದು, ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!