Mysore
26
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಹೆಡಿಯಾಲ ಎಸಿಎಫ್‌ ಆಗಿ ಎ.ವಿ.ಸತೀಶ್‌ ನೇಮಕ

ಮೈಸೂರು: ಕರ್ನಾಟಕ ಅರಣ್ಯ ಇಲಾಖೆ ಹಲವು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಹೆಡಿಯಾಲ ಉಪವಿಭಾಗದ ಎಸಿಎಫ್‌ ಆಗಿ ಹಿರಿಯ ಅಧಿಕಾರಿ ಎ.ವಿ.ಸತೀಶ್‌ ಅವರನ್ನು ನೇಮಕ ಮಾಡಲಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲ್ಲೂಕು ಹೆಡಿಯಾಲ ಉಪವಿಭಾಗದ ಎಸಿಎಫ್‌ ಆಗಿ ಸತೀಶ್‌ ನೇಮಕಗೊಂಡಿದ್ದಾರೆ.

ಸತೀಶ್‌ ಅವರು, ಮೈಸೂರು ವೃತ್ತದ ಅರಣ್ಯ ಕಾರ್ಯಯೋಜನೆ ಹಾಗೂ ಮೋಜಣಿ ವಿಭಾಗದ ಎಸಿಎಫ್‌ ಆಗಿ ಕೆಲಸ ಮಾಡುತ್ತಿದ್ದರು.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನವರಾದ ಸತೀಶ್‌ ಅವರಿಗೆ ಶಿವಮೊಗ್ಗ, ಮಂಡ್ಯದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ.

ಈ ಹಿಂದೆ ಅವರು ನಾಗರಹೊಳೆಯ ಅಂತರಸಂತೆ ಹಾಗೂ ಡಿ.ಬಿ.ಕುಪ್ಪೆಯ ಆರ್‌ಎಫ್‌ಓ ಆಗಿದ್ದರು.

ಕರ್ತವ್ಯದಲ್ಲಿ ಅನುಭವ ಪಡೆದಿರುವ ಸತೀಶ್‌ ಅವರನ್ನು ಕರ್ನಾಟಕ ಅರಣ್ಯ ಇಲಾಖೆ ಹೆಡಿಯಾಲ ಎಸಿಎಫ್‌ ಆಗಿ ನೇಮಕ ಮಾಡಿದೆ.

Tags:
error: Content is protected !!