ಮೈಸೂರು: ಮೈಸೂರಲ್ಲಿ ವೈದ್ಯರ ನಿರ್ಲಕ್ಷಕ್ಕೆ ಆರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎಚ್‌ಡಿ ಕೋಟೆಯ ಸೇಂಟ್ ಮೇರಿ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಬೆಳಗನಹಳ್ಳಿಯ ಶಿವರಾಜ್ ಎಂಬುವವರ ಪುತ್ರಿ ತನುಷ (6) ಸಾವನ್ನಪ್ಪಿರುವ ಬಾಲಕಿ ಎಂದು ತಿಳಿಬಂದಿದೆ. ನಿನ್ನೆ ಬಾಲಕಿಗೆ ವಾಂತಿ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಪಾಳಿಯ ವೈದ್ಯರು ಬಾಲಕಿ ತನುಷಾಗೆ ಚಿಕಿತ್ಸೆ ನೀಡಿದ್ದರು.
ಇಂದು ಬೆಳಿಗ್ಗೆ ಚೆನ್ನಾಗೇ ಇದ್ದ ಬಾಲಕಿ ತನುಷ ದಿಢೀರನೆ ಸಾವನಪ್ಪಿದ್ದಾಳೆ. ತನುಷ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣವೆಂದು ಪೋಷಕರು ಇದೀಗ ಆರೋಪಿಸುತ್ತಿದ್ದು, ಆರೋಗ್ಯ ಕೇಂದ್ರಕ್ಕೆ ಟಿ ಎಚ್ ಓ ಡಾ. ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಟಿಎಚ್‌ಓ ಭರವಸೆ ನೀಡಿದ್ದಾರೆ.