Mysore
28
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿಯನ್ನು ರಕ್ಷಿಸಿದ ಪೊಲೀಸ್‌ ದಫೇದಾರ್ ಸಾ.ನಾ.ಗೋವಿಂದರಾಜು;‌ ಸಾರ್ವಜನಿಕರ ಮೆಚ್ಚುಗೆ

ಮೈಸೂರು : ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿಯನ್ನು ಪೊಲೀಸ್‌ ದಫೇದಾರ್ ಸಾ.ನಾ.ಗೋವಿಂದರಾಜು ಅವರು ರಕ್ಷಣೆ ಮಾಡಿ ‌ಮಾನವೀಯತೆ ಮೆರೆದಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಯರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೃಹಿಣಿಯೊಬ್ಬರು ಮದ್ಯರಾತ್ರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ತಾನು ಬದುಕಬೇಕೆಂಬ ಆಸೆಯಿಂದ ಅಸ್ವಸ್ಥ ಗೃಹಿಣಿ ಆಂಬುಲೆನ್ಸ್‌ಗೆ ದೂರವಾಣಿ ಕರೆ ಮಾಡಿದ್ದಾರೆ. ಎಷ್ಟು ಪ್ರಯತ್ನಿಸಿದರೂ ಆಂಬುಲೆನ್ಸ್‌ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ 112ರ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ನನ್ನನ್ನು ಬದುಕಿಸಿ, ನಾನು ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದೇನೆ. ನನ್ನ ಗಂಡ ನನ್ನನ್ನು ಆಸ್ಪತ್ರೆಗೆ ಹೋಗಲು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ತಕ್ಷಣ ಹೆಡ್ ಕಾನ್ಸ್‌ಟೇಬಲ್ ಗೋವಿಂದರಾಜ್ ಅವರು, ದೂರುದಾರೆ ಮಂಜುಳಾ ದೇವರಾಜ್ ಅವರ ಯರಹಳ್ಳಿ, ಕಾವಲ್ ನಲ್ಲಿರುವ ಮನೆಗೆ ಹೋಗಿ ಆಕೆಯನ್ನು ರಕ್ಷಿಸಿದ್ದಾರೆ. ತಕ್ಷಣ ಅವರನ್ನು ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ದಫೇದಾರ್ ಸಾ.ನಾ.ಗೋವಿಂದರಾಜು ಕೆಲಸಕ್ಕೆ ತಾಲ್ಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Tags:
error: Content is protected !!