Mysore
23
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ೬೮ನೇ ರೈಲ್ವೆ ಸಪ್ತಾಹ ಆಚರಣೆ !

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ೬೮ನೇ ರೈಲ್ವೆ ಸಪ್ತಾಹವನ್ನು ಶುಕ್ರವಾರ ನಗರದ ಯಾದವಗಿರಿಯ ಚಾಮುಂಡಿ ಆಫೀಸರ್ಸ್ ಕ್ಲಬ್‌ನಲ್ಲಿ ಆಚರಿಸಲಾಯಿತು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್‌ವಾಲ್ ಅವರು, ೨೦೨೨-೨೩ನೇ ಹಣಕಾಸು ವರ್ಷದಲ್ಲಿನ ಅಸಾಧಾರಣ ಕಾರ್ಯಕ್ಷಮತೆ ತೋರಿ ರೈಲ್ವೆಗೆ ಅನುಕರಣೀಯ ಕೊಡುಗೆಗಳನ್ನು ನೀಡಿದ ಒಟ್ಟು ೨೨ ಪರಿಶ್ರಮಿ ಸಿಬ್ಬಂದಿಗಳಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ವಿನಾಯಕ್ ನಾಯಕ್ ಮತ್ತು ಶ್ರೀಮತಿ ಇ.ವಿಜುಯ ಉಪಸ್ಥಿತರಿದ್ದರು. ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ವಿಷ್ಣು ಗೌಡ ಮತ್ತು ಮೈಸೂರು ವಿಭಾಗದ ಇತರ ವಿಭಾಗಗಳ ಅಧಿಕಾರಿಗಳು  ಭಾಗವಹಿಸಿದ್ದರು.

Tags:
error: Content is protected !!