ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು, ಗೋಲ್ಡನ್ ಸಿಟಿ ಮತ್ತು ಮೈಸೂರು ಸ್ತ್ರೀ ಶಕ್ತಿ ಮಹಿಳಾ ವೇದಿಕೆ ಇವುಗಳ ಸಹಯೋಗದಲ್ಲಿ ಡಿ.೯ರಂದು ವಿಶ್ವ ವಿಶೇಷಚೇತನರ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ೧೦ ಮಂದಿ ವಿಕಲಾಂಗರಿಗೆ ಉಚಿತ ಕೃತಕ ಕಾಲು ಪರಿಕರವನ್ನು ವಿತರಿಸಲಾಗುವುದು ಎಂದು ಲಯನ್ಸ್ ಕ್ಲಬ್ ಆಫ್ ಮೈಸೂರು ಕಾರ್ಯದರ್ಶಿ ಪ್ರಮಿಳಾ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೧ ಗಂಟೆಗೆ ಹೊಸಮಠದ ನಟರಾಜ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಮಹಾಪೌರ ಶಿವಕುಮಾರ್, ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ನಗರಪಾಲಿಕೆ ಸದಸ್ಯರಾದ ಭಾಗ್ಯ ಮಾದೇಶ್, ಕಾಂಗ್ರೆಸ್ ಮುಖಂಡ ಹರೀಶ್‌ಗೌಡ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಈಗಾಗಲೇ ಗುರುತಿಸಲಾಗಿರುವ ೧೦ ಮಂದಿ ಬಡ ಕುಟುಂಬದ ವಿಕಲಾಂಗರಿಗೆ ಕೃತಕ ಕಾಲು ವಿತರಿಸಲಾಗುವುದು ಎಂದು ತಿಳಿಸಿದರು.
ಸುರೇಶ್, ಜಿ.ಸೋಮಚಂದ್ರ ಮೂರ್ತಿ, ಲಕ್ಷ್ಮೀಪತಿ, ಜಿ.ಎನ್.ಉಮಾಶಂಕರ್, ಆಶಾ ಜೆ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.