Mysore
22
overcast clouds

Social Media

ಶನಿವಾರ, 01 ಆಗಸ್ಟ್ 2026
Light
Dark

ಮೈಸೂರು : ಸೆ.18 ರಿಂದ ಕಿವುಡರ ಕ್ರಿಕೆಟ್ ಪಂದ್ಯಾವಳಿ

ಮೈಸೂರು: ಮೈಸೂರು ಜಿಲ್ಲಾ ಕಿವುಡರ ಸಂಸ್ಥೆ ವತಿಯಿಂದ ಇತರೆ ಸಂಸ್ಥೆಗಳ ಸಹಯೋಗದೊಡನೆ ಸೆ. 18 ರಿಂದ 24 ರವರೆಗೆ ನಗರದ ಆರ್‌ಬಿಐ ಮೈದಾನದಲ್ಲಿ ಕಿವುಡರ ರಾಷ್ಟ್ರಮಟ್ಟದ ಟಿ-20 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಆಯೋಜಕರಲ್ಲಿ ಒಬ್ಬರಾದ ಹೇಮಂತ್‌ಚಂದ್ರ ಮಾತನಾಡಿ, ಪಂದ್ಯಾವಳಿಯಲ್ಲಿ ಚೆನ್ನಾಗಿ ಆಡಿದ ಆಟಗಾರರು ಮುಂಬರುವ ಜನವರಿಯಲ್ಲಿ ಕೇರಳದ ತಿರುವನಂತಪುರದಲ್ಲಿ ನಡೆಯುವ ವಿಶ್ವ ಕಿವುಡರ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗುತ್ತಾರೆ. ಸೆ.24 ರಂದು ಇಲ್ಲಿನ ವಿಜೇತ ತಂಡಗಳಿಗೆ ಬಹುಮಾನ ನೀಡಲಾಗುವುದು ಎಂದರು.
ಈ ಪಂದ್ಯಾವಳಿಯಲ್ಲಿ ದೇಶದಾದ್ಯಂತದಿಂದ ಪ್ರತಿಷ್ಠಿತ ತಂಡಗಳು ಆಗಮಿಸುತ್ತಿವೆ. ಹೀಗಾಗಿ ಕ್ರೀಡಾಸಕ್ತರು ಆಗಮಿಸಿ ವೀಕ್ಷಿಸಬೇಕೆಂದು ಮನವಿ ಮಾಡಿದರು. ಎಸ್.ಮೂರ್ತಿ, ಜೆ.ವಿ.ಮಹೇಶ್‌ವರ್ಮ, ನವೀನ್‌ಕುಮಾರ್. ಎ.ಗಣೇಶ್‌ರಾವ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!