Mysore
20
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಸನ್ನಡತೆ ಆಧಾರ : ಮೈಸೂರಿನ ಕಾರಾಗೃಹದಿಂದ 11 ಮಂದಿಗೆ ಬಿಡುಗಡೆ ಭಾಗ್ಯ

ಮೈಸೂರು: ಗಣರಾಜ್ಯೋತ್ಸವದ ಪ್ರಯುಕ್ತ ಮೈಸೂರು ಕೇಂದ್ರ ಕಾರಾಗೃಹದಿಂದ ೧೧ ಮಂದಿ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಅಲ್ಪಾವಧಿ ಶಿಕ್ಷೆಗೆ ಗುರಿಯಾಗಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ ಈ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಗುರುತಿಸಲಾಗಿತ್ತು. ಗುರುವಾರ ಕೇಂದ್ರ ಕಾರಾಗೃಹ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ೧೧ ಕೈದಿಗಳಿಗೆ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ.ಸಿ.ದಿವ್ಯಶ್ರೀ ಅವರು ಬಿಡುಗಡೆ ಪತ್ರ ನೀಡಿ, ಉತ್ತಮ ಜೀವನ ನಡೆಸಲು ಶುಭ ಹಾರೈಸಿದರು.

೭೫ನೇ ಸ್ವಾತಂತ್ರ್ಯ ದಿನಾಚರಣೆಯ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಎರಡನೇ ಹಂತದಲ್ಲಿ ಮೈಸೂರು ಕೇಂದ್ರ ಕಾರಾಗೃಹದಿಂದ ೧೧ ಮಂದಿ ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ ಅಂದರೆ ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ೨೦ ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರದ ಸಹಾಯಕ ಅಧೀಕ್ಷಕ ವಿಜಯ ಎಸ್. ರೋಡರ್, ಜೈಲರ್‌ಗಳಾದ ಕೆ.ಎಚ್.ವರದರಾಜು, ಎಂ.ಡಿ.ಧರಣೇಶ, ಅಮರ್ ಹುಲ್ಲೋಳಿ, ಗೀತಾ ಮಾಲಗಾರ ಇದ್ದರು.

ಬಿಡುಗಡೆಯಾದವರು: ಚಾಮರಾಜನಗರದ ಎಂ. ನಾಗರಾಜಪ್ಪ, ಹಾಸನದ ದೊರೆಸ್ವಾಮಿ, ಮಡಿಕೇರಿಯ ರಘು, ಬಿ.ಕೆ.ಜಗದೀಶ, ಹುಣಸೂರಿನ ಸ್ವಾಮಿ ಗೌಡ, ಚಿತ್ರದುರ್ಗದ ಮಹಾಂತೇಶ್, ಮದ್ದೂರಿನ ಲಂಕೇಶ, ಶ್ರೀರಂಗಪಟ್ಟಣದ ನಾಗರಾಜು, ಸೋಮವಾರಪೇಟೆಯ ಸಿ.ಟಿ.ಜೇಮ್ಸ್, ಮೈಸೂರಿನ ಶ್ರೀಕಂಠಾರಾಧ್ಯ, ತೆಂಜಿನ್ ಬಿಡುಗಡೆಯಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!