ಮೈಸೂರು: ಮೈಸೂರು ಮಹಾನಗರಪಾಲಿಕೆಯ ಮಹಾಪೌರ-ಉಪಮಹಾಪೌರರ ಮೀಸಲಾತಿಯು ಕೊನೆಗೂ ನಿಗದಿಯಾಗಿದೆ.
ಈ ಬಾರಿ ಸಾಮಾನ್ಯ ವರ್ಗಕ್ಕೆ ಮಹಾಪೌರ, ಹಿಂದುಳಿದ ವರ್ಗ ಎ(ಮಹಿಳೆ)ವರ್ಗಕ್ಕೆ ಉಪ ಮಹಾಪೌರ ಸ್ಥಾನವು ಮೀಸಲಾಗಿದೆ. ರಾಜ್ಯಸರ್ಕಾರ ಮೀಸಲಾತಿ ಹೊರಡಿಸಿರುವುದರಿಂದ ಚುನಾವಣಾಧಿಕಾರಿಗಳೂ ಆದ ಪ್ರಾದೇಶಿಕ ಆಯುಕ್ತರು ಚುನಾವಣಾ ದಿನಾಂಕ ಪ್ರಕಟಿಸುವುದು ಬಾಕಿ ಉಳಿದಿದೆ.
ಮಹಾಪೌರರಾದ ಸುನಂದಾ ಪಾಲನೇತ್ರ, ಉಪಮಹಾಪೌರ ಅನ್ವರ್ ಬೇಗ್ ಅವಧಿಯು ಫೆಬ್ರವರಿ ತಿಂಗಳು 24ಕ್ಕೆ ಮುಕ್ತಾಯಗೊಳ್ಳಲಿದೆ.