Light
Dark

ಮೈಸೂರು : ಚಿಕಿತ್ಸೆ ಫಲಿಸದೆ ಡಾ. ಅಪ್ಪಾಜಿ ಗೌಡ ನಿಧನ

ಮೈಸೂರು : ಕೆಎಸ್ಒಯುನ ನಿವೃತ್ತ ಸಹಾಯಕ ಉಪನ್ಯಾಸಕ ಡಾ.  ಅಪ್ಪಾಜಿ ಗೌಡ ಅವರು ನಿಧನರಾಗಿದ್ದಾರೆ.

ಕಳೆದ ಶನಿವಾರದಂದು ಬೋಗಾದಿ ರಿಂಗ್ ರೋಡ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಪ್ಪಾಜಿ ಗೌಡ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಅಪ್ಪಾಜಿ ಗೌಡ ಅವರ ಅಂತಿಮ ದರ್ಶನಕ್ಕೆ ಬೋಗಾದಿಯ ಬ್ಯಾಂಕರ್ಸ್ ಲೇಔಟ್ ಸಮೀಪದ ಸ್ವಗೃಹದಲ್ಲಿ ಬೆಳಿಗ್ಗೆ 11 ರಿಂದ 1 .30 ರವರೆಗೆ ವ್ಯವಸ್ಥೆ ಮಾಡಲಾಗಿದೆ.

ಮೃತರ ಅಂತ್ಯಸಂಸ್ಕಾರವನ್ನು ಸ್ವಗ್ರಾಮವಾದ ಕೆ. ಆರ್. ನಗರದ ಸಾಲಿಗ್ರಾಮ ಹೋಬಳಿಯ ನಾಟನಹಳ್ಳಿಯಲ್ಲಿ ಸಂಜೆ 4:30ಕ್ಕೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಪ್ಪಾಜಿ ಗೌಡ ಅವರ ನಿಧನಕ್ಕೆ ವಿಶ್ರಾಂತ ಕುಲಪತಿ ಪ್ರೂ. ಕೆ. ಎಸ್. ರಂಗಪ್ಪ ಸೇರಿದಂತೆ ಇತರ ಗಣ್ಯರು ಕಂಬನಿ ಮಿಡಿದಿದ್ದಾರೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ