ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಅರಮನೆ ಆವರಣದಲ್ಲಿ ಸೆ. 26ರಿಂದ ಅ.3ರವರೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಸೆ.26: ನಾದಸ್ವರ- ಯದುನಾಥ್ ಮತ್ತು ಗುರುರಾಜ್ ತಂಡ, ವೀರಭದ್ರ ಕುಣಿತ-ಕಿರಾಳು ಮಹೇಶ್, ನೃತ್ಯರೂಪಕ-ಅಮೃತ ಭಾರತಿಗೆ ಕನ್ನಡದಾರತಿ-ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್, ಸುಗಮಸಂಗೀತ-ಎಚ್.ಆರ್.ಲೀಲಾವತಿ, ಮೈಸೂರು.

ಸೆ.27: ಕಂಸಾಳೆ-ಕಂಸಾಳೆ ಮಹೇಶ ಮತ್ತು ತಂಡ, ಭಕ್ತಿಸಂಗೀತ- ಇಂದೂನಾಗರಾಜ್ ಮತ್ತು ಲಕ್ಷ್ಮೀನಾಗರಾಜ್ ತಂಡ, ನೃತ್ಯರೂಪಕ- ಲಲಿತಾರ್ಣವಲಯಾಭಿನಯ ಕಲ್ಚರಲ್ ಫೌಂಡೇಷನ್, ಕರ್ನಾಟಕಶಾಸ್ತ್ರೀಯ ಸಂಗೀತ-ಚೆನ್ನೈನ ವಿದ್ವಾನ್ ಸಂದೀಪ್ ನಾರಾಯಣ್.

ಸೆ.28: ಹಾರ್ಮೋನಿಯಂ- ಕರ್ನಾಟಕ ಕಲಾಶ್ರೀ ವಿದ್ವಾನ ಸಿ.ರಾಮದಾಸ್, ದಾಸರಪದ- ಪಂಡಿತ ಗಣಪತಿ ಭಟ್ ಹಾಸಣಗಿ, ಭರತನಾಟ್ಯ- ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಮತ್ತು ತಂಡ, ತಬಲವಾದನ- ಮುಂಬೈನ ಉಸ್ತಾದ್ ಘಜಲ್ ಖುರೇಷಿ.

ಸೆ.29: ಪೊಲೀಸ್ ಬ್ಯಾಂಡ್- ಕರ್ನಾಟಕ ಮತ್ತು ಇಂಗ್ಲಿಷ್ ಬ್ಯಾಂಡ್, ವಚನಗಾಯನ- ಪಂಡಿತ್ ವೆಂಕಟೇಶ್ ಕುಮಾರ್, ಓಡಿಸ್ಸಿ ನೃತ್ಯ- ಮಧುಲಿತ ಮಹೋಪಾತ್ರ ಮತ್ತು ತಂಡ, ವಿಶ್ವಸಂಗೀತ (ಕರ್ನಾಟಕ ವಾದ್ಯಸಂಗೀತಗಳ ಸಮ್ಮಿಲನ)-ಪಂಡಿತ್ ಪ್ರವೀಣ್ ಡಿ.ರಾವ್ ತಂಡ.

ಸೆ.30: ಭಕ್ತಿಸಂಗೀತ- ಜ್ಞಾನಮೂರ್ತಿ ಮತ್ತು ತಂಡ, ವಾದ್ಯಗಳಲ್ಲಿ ಒಡೆಯರ್ ಕೃತಿಗಳು- ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡ, ಕೂಚುಪುಡಿ ನೃತ್ಯ- ಕರ್ನಾಟಕ ಕಲಾಶ್ರೀ ಊಪಾ ರಾಜೇಶ ಮತ್ತು ತಂಡ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ- ಕಲ್ಕತ್ತಾದ ವಿದುಷಿ ಕೌಶಿಕಿ ಚಕ್ರವರ್ತಿ.

ಅ.1: ಜಾನಪದ ಗಾಯನ- ಪನ್ನಗ ವಿಜಯಕುಮಾರ ವೇದವ್ಯಾಸ ಸೇವಾ ಟ್ರಸ್ಟ್, ರಂಗಗೀತೆಗಳು- ಟಿ.ಎಸ್.ನಾಗಾಭರಣ ಬೆನಕ ತಂಡ, ಪೊಲೀಸ್ ಬ್ಯಾಂಡ್-ಮಾಸ್ ಬ್ಯಾಂಡ್, ಸಿತಾರ್ ಸಿಂಪೋನಿ- ಮನೋ ಮ್ಯೂಸಿಕ್ ಲೈನ್ಸ್.

ಅ.2: ಜನಪದ ಸಂಗೀತ- ಕಂಬದ ರಂಗಯ್ಯ ಮತ್ತು ತಂಡ, ನೃತ್ಯ ರೂಪಕ ನವಶಕ್ತಿ ವೈಭವ- ಕು.ರೂಪಿಕಾ ಮತ್ತು ವಂದನಾ ಕಾಸರವಳ್ಳಿ, ಸಂಗೀತ ವೈವಿಧ್ಯ(ಜಾನಪದ, ಸೂಫಿ ಮತ್ತು ಆಕ್ಯಾವೆಲ್ಲಾ)- ಮನೋಜ್ ವಶಿಷ್ಟ ಮತ್ತು ಆರುಂಧತಿ ವಶಿಷ್ಟ ತಂಡ.

ಅ.3 : ನೃತ್ಯ ಮತ್ತು ಸಂಗೀತ ಸಮ್ಮಿಲನ- ವಿಶೇಷ ಚೇತನ ಕಲಾವಿದರು, ಜನಪದ ಸಂಗೀತ -ಕಡಬಗೆರೆ ಮುನಿರಾಜು, ಪಾರಂಪರಿಕ ನೃತ್ಯ ಸಮ್ಮಿಲನ- ಸ್ಥಳೀಯ ಕಲಾವಿದರು, ಗಜಲ್- ಭಜನ್ ಸಾಮ್ರಾಟ್ ಪದ್ಮಶ್ರೀ ಅನೂಪ್ ಬಲೋಟ.






