Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯಾವೆಲ್ಲ ನಾಯಕರು ಬಿಜೆಪಿಗೆ ಸೇರಲಿದ್ದಾರೆ ಎಂಬುದನ್ನು ಈಗ ಹೇಳುವುದಿಲ್ಲ : ಕೆ.ಸಿ.ನಾರಾಯಣಗೌಡ

ಮೈಸೂರು: ಮುಂಬರುವ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಎರಡೂ ಪಕ್ಷಗಳ ಮತ್ತಷ್ಟು ನಾಯಕರು ಬಿಜೆಪಿಗೆ ಸೇರಲಿದ್ದಾರೆ. ಯಾವೆಲ್ಲಾ ನಾಯಕರು ಬಿಜೆಪಿ ಸೇರಲಿದ್ದಾರೆ ಎಂಬುದನ್ನು ಈಗ ಹೇಳುವುದಿಲ್ಲ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ಗುಜರಾತ್ ನಂತೆ ಕರ್ನಾಟಕದಲ್ಲೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಹಿಮಾಚಲಪ್ರದೇಶದಲ್ಲಿ ಕೆಲವೊಂದು ಕಾರಣಗಳಿಂದ ಸೋಲಾಗಿದೆ. ಸ್ಥಳೀಯ ಕಾರಣಗಳಿಂದ ಅಲ್ಲಿ ಬಿಜೆಪಿಗೆ ಸೋಲಾಗಿದೆ. ಮುಂಬರುವ ವಿಧಾಸಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲೂ ಜನಸಂಕಲ್ಪ ಯಾತ್ರೆ ನಡೆಯಲಿದೆ. ಸಚ್ಚಿದಾನಂದ ಈಗಾಗಲೇ ಬಿಜೆಪಿ ಸೇರಿದ್ದು, ಮತ್ತಷ್ಟು ನಾಯಕರು ಸೇರುತ್ತಾರೆ ಎಂದರು.

ನಾವು ಹದಿನೇಳು ಮಂದಿ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಬಿಜೆಪಿ ಸೇರ್ಪಡೆ ಆದ ಬಳಿಕ ನಮ್ಮನ್ನು ಪಕ್ಷ ಚೆನ್ನಾಗಿ ನಡೆಸಿಕೊಂಡಿದೆ. ಸಚಿವ ಸ್ಥಾನ ಕೊಟ್ಟು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ನಾವು ಬಿಜೆಪಿ ತೊರೆಯುವುದಿಲ್ಲ. ಬಿಜೆಪಿಯಲ್ಲೇ ಮುಂದುವರೆಯುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್, ಜೆಡಿಎಸ್‌ಗೆ ಹೋಗುವುದಿಲ್ಲ ಎಂದರು.

ರೌಡಿಶೀಟರ್ ಗಳನ್ನು ಪಕ್ಷಗಳಿಗೆ ಸೇರ್ಪಡೆ ಕುರಿತು ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿರುವ ವಿಚಾರ ಮಾತನಾಡಿದ ಅವರು, ರೌಡಿಗಳನ್ನು ಹುಟ್ಟು ಹಾಕಿದ್ದು ಯಾರು? ಗೂಂಡಾಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಗಳಿಲ್ಲ ಹೇಳಿ, ಅವರನ್ನು ಏಕೆ ಓಡಿಸಿಲ್ಲ. ಅಲ್ಲಿಯೇ ರೌಡಿಗಳಿಗೆ ಟ್ರೈನಿಂಗ್ ಕೊಡಲಾಗುತ್ತದೆ. ಯಾವಾಗಲೂ ಗುಂಡಾಗಳೇ ಆಗಿರ್ತಾರೆ ಎನ್ನೋದು ಸರಿಯಲ್ಲ. ಬಿಜೆಪಿ ಸೇರ್ಪಡೆ ಆಗುವವರನ್ನು ರೌಡಿ ಶೀಟರ್ ಎಂದು ಹೇಳುತ್ತಿದ್ದಾರೆ. ಅವರಿಗೆ ಹೊಟ್ಟೆ ಉರಿ, ಅಲ್ಲಿದ್ದವರು ಬಿಜೆಪಿ ಸೇರುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಈ ರೀತಿ ಹೇಳ್ತಿದ್ದಾರೆ ಎಂದರು.

ಬಿಜೆಪಿ ಸೇರ್ಪಡೆಗೆ ಮುಂದಾಗಿರುವವರು ಅವರ ಪಕ್ಷದಲ್ಲಿ ಇರುವವರೆಗೂ ರೌಡಿಶೀಟರ್ ಗಳಾಗಿರಲಿಲ್ಲವೇ? ರೌಡಿಶೀಟರ್‌ಗಳಿಗೆ ಮನಿ ಫಂಡ್ ಮಾಡುತ್ತಿದ್ದವರು ಯಾರು? ಬಿಜೆಪಿಯಲ್ಲಿ ಇರುವವರು ಪುಣ್ಯಾತ್ಮರು, ವಿದ್ಯಾವಂತರು, ತ್ಯಾಗಿಗಳು, ಆರ್‌ಎಸ್ ಎಸ್ ಹಿನ್ನೆಲೆಯುಳ್ಳವರು. ಕುಡ್ಲು ಮಚ್ಚು ಹಿಡಿದಿರುವವರು ಬಿಜೆಪಿಯಲ್ಲಿಲ್ಲ. ಕುಡ್ಲು ಮಚ್ಚು ಹಿಡಿಯುವವರು ಯಾವ ಪಕ್ಷದಲ್ಲಿದ್ದಾರೆಂದು ಎಲ್ಲರಿಗೂ ಗೊತ್ತಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ