Mysore
26
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಮೈಸೂರಿಂದ ಅಹಮದಾಬಾದ್‌ಗೆ ತೆರಳಿದ ಮೋದಿ ಸಹೋದರ ಪ್ರಹ್ಲಾದ

ಮೈಸೂರು: ಕಾರು ಅಪಘಾತದಿಂದ ಗಾಯಗೊಂಡು ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಪ್ರಹ್ಲಾದ ಮೋದಿ ಹಾಗೂ ಕುಟುಂಬದ ಸದಸ್ಯರು ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಂಡು, ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದರು.

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್‌ ಆರೋಗ್ಯದ ಏರುಪೇರಿನಿಂದ ಆಸ್ಪತ್ರೆಗೆ ದಾಖಲಾದ ಕಾರಣ ಅವರನ್ನು ನೋಡಲು, ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶೇಷ ವಿಮಾನದ ಮೂಲಕ ಕಿರಿಯ ಸಹೋದರ ಪ್ರಹ್ಲಾದ್ ಕುಟಂಬವು ತೆರಳಿತು.

ಅದಕ್ಕೂ ಮೊದಲು ತಾಯಿ ಹೀರಾಬೆನ್‌ ಗುಣಮುಖರಾಗಲೆಂದು ಪ್ರಹ್ಲಾದ ಮೋದಿ ಅವರ ಮಗಳು ಹಾಗೂ ಅಳಿಯ ‌ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ತಾಲ್ಲೂಕಿನ ಕಡಕೊಳ ಬಳಿ ಮಂಗಳವಾರ ಪ್ರಹ್ಲಾದ ಮೋದಿ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಐವರು ಗಾಯಗೊಂಡಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!