ಮೈಸೂರು :ಕೇಂದ್ರ ಸರ್ಕಾರದ ಹರ್ ಘರ್ ತಿರಂಗ ಅಭಿಯಾನದ ನಂತರ ವಜಾ ಸಂಗ್ರಹ ಅಭಿಯಾನಕ್ಕೆ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಇಂದಿಲ್ಲಿ ಚಾಲನೆ ನೀಡಿದ್ದಾರೆ .
ನಗರದ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಕಂಪನಿಯ ವಸಂತ್ ಸರ್ವಿಸ್ ಸ್ಟೇಷನ್ ,ಮಾರುತಿ ಸರ್ವಿಸ್ ಸ್ಟೇಷನ್ ಗಳಲ್ಲಿ ಆಯೋಜಿಸಿದ್ದ ಧ್ವಜ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಬಳಸಲಾದ ಧ್ವಜಗಳನ್ನು ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಭವಿಷ್ಯದ ಬಳಕೆಗಾಗಿ ಉತ್ತಮ ಧ್ವಜಗಳನ್ನು ಸಂರಕ್ಷಿಸಲಾಗುವುದು ಮತ್ತು ಹಾನಿಗೊಳಗಾದ ಧ್ವಜಗಳನ್ನು ಗೌರವದಿಂದ ವಿಲೇವಾರಿ ಮಾಡಲಾಗುತ್ತದೆ ಎಂದರು . ಇದೇ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಕಂಪನಿಯ ಮೈಸೂರು ವಿಭಾಗದ ವ್ಯವಸ್ಥಾಪಕರಾದ ಸುನೀಲ್ ಕುಮಾರ್ ಮಿಶ್ರ ಮಾತನಾಡಿ,ತ್ರಿವರ್ಣ ಧ್ವಜ ಸಂರಕ್ಷಣೆ’ಗೌರವ ಸಮರ್ಪಣೆ ಭಾರತೀಯರ ಕರ್ತವ್ಯವಾಗಿದೆ ಈ ದಿಸೆಯಲ್ಲಿ ಕಂಪನಿ ವತಿಯಿಂದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಧ್ವಜಗಳನ್ನು ಹಸ್ತಾಂತರಿಸುವವರಿಗೆ ಕಂಪನಿಯ XP95 ಬ್ರ್ಯಾಂಡಿಂಗ್ ಹೊಂದಿರುವ ಟಿ ಶರ್ಟ್‌ಗಳನ್ನು ನೀಡಲಾಗಿದೆ.ನಗರದ ಪ್ರತಿಯೊಬ್ಬ ಪ್ರಜೆಯೂ ಧ್ವಜಗಳನ್ನು ಈ ಸಂಗ್ರಹಣಾ ಕೇಂದ್ರಕ್ಕೆ ನೀಡುವಂತೆ ಅವರು ಕರೆ ನೀಡಿದರು .
ಅಭಿಯಾನದಲ್ಲಿ ಅಧ್ಯಕ್ಷ ಫಾರ್ಮ್ ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಕಂಪನಿಯ ಸಿಬ್ಬಂದಿಗಳು ಡೀಲರ್ ಗಳು ಸಾರ್ವಜನಿಕರು ಉಪಸ್ಥಿತರಿದ್ದರು.