ಗುಂಡ್ಲುಪೇಟೆ: ಕಾಂಗ್ರೆಸ್ ಪಕ್ಷದ ಮುಖಂಡ ಗಣೇಶ್ ಪ್ರಸಾದ್ ಅವರ ಬಗ್ಗೆ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುಡ್ನಾಕೂಡು ಪ್ರಕಾಶ್ ಅವರು ಜನವಿರೋಧಿ ಎಂದು ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ನೀಡಿದ್ದರು. ಈ ವಿಚಾರವಾಗಿ ಇಂದು ಚಾಮರಾಜನಗರ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕುಲಗಾಣ ಮಹೇಶ್ ರವರು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ನಿರಂಜನ್ ಕುಮಾರ್ ರವರ ಜನವಿರೋಧಿ ಶಾಸಕರು ಎಂದು ಕ್ಷೇತ್ರದ ಜನತೆ ಗೂತ್ತಿದೆ. ನೆನ್ನೆಯಷ್ಟೇ ಗಣೇಶ್ ಪ್ರಸಾದ್ ರವರ ವಿರುದ್ಧ ಪತ್ರಿಕೆ ಹೇಳಿಕೆ ನೀಡಿರುವ ಮುಡ್ನಾಕೂಡು ಪ್ರಕಾಶ್ ರವರೇ ಶಾಸಕರಾದ ನಿರಂಜನ್ ಕುಮಾರ್ ರವರು ಸಂಸದ ವಿ.ಶ್ರೀನಿವಾಸ ಪ್ರಸಾದ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮೂರು ನಾಲ್ಕು ವರ್ಷಗಳಿಂದ ಆಚರಿಸಿದ್ದಾರೆಯೇ ? ದಲಿತರಿಗೆ ಬಿಜೆಪಿಯ ಕೂಡುಗೆ ಎನು ? ಜನಪರವಾದ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕೈಕಟ್ಟಿ ಕುಳಿತಿರುವ ಶಾಸಕರ ಬಗ್ಗೆ ನೀವೇಕೆ ದ್ವನಿ ಎತ್ತುತ್ತಿಲ್ಲಾ.
ಯಾವ ಅಧಿಕಾರವೂ ಇಲ್ಲದೆ ಜನಪರವಾಗಿ ಜನಸೇವೆ ಮಾಡುತ್ತಿರುವ ಯುವ ಮುಖಂಡರಾದ ಗಣೇಶ್ ಪ್ರಸಾದ್ ರವರ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇದೀಯಾ ?
ಎಂದು ಪ್ರಶ್ನಿಸುವ ಮೂಲಕ ಪ್ರಕಾಶ್ ಅವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.