ಮೈಸೂರು: ದಟ್ಟಗಳ್ಳಿಯ ಗುರು ರಾಘವೇಂದ್ರ ಆರಾಧನಾ ಸಮಿತಿಯು ಗುರು ರಾಘವೇಂದ್ರ ರಾಯರ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ನಾಳೆ (ಆ.13ರಂದು) ಸಂಜೆ 6.30ಕ್ಕೆಡಾ.ಮುದ್ದುಮೋಹನ ಅವರಿಂದ ಶಾಸ್ತ್ರೀಯ ಸಂಗೀತ, ದಾಸವಾಣಿ ಆಯೋಜಿಸಲಾಗಿದೆ.
ದಟ್ಟಗಳ್ಳಿ 3ನೇ ಹಂತದ ಸೋಮನಾಥನಗರದ 3ನೇ ಬ್ಲಾಕ್ ನ ಸಾರ್ವಭೌಮ, 29 ಇಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮುದ್ದುಮೋಹನ ಅವರು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಗಾಯಕರು. ಅವರಿಗೆ ಹಾರ್ಮೋನಿಯಂನಲ್ಲಿ ಪಂ.ವೀರಭದ್ರಯ್ಯ ಹಿರೇಮಠ, ತಬಲಾದಲ್ಲಿ ಗೋಪಾಲ ಕೃಷ್ಣ ಹೆಗಡೆ ಹಾಗೂ ತಾಳದಲ್ಲಿ ಪಡಿಯಾರ್ ಸಾಥ್ ನೀಡಲಿದ್ದಾರೆ.