ಮೈಸೂರು: ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ಮೊನ್ನೆಯಷ್ಟೇ ( ಡಿಸೆಂಬರ್ 7 ) ಒಂದು ಕಪ್ಪು ಚಿರತೆ ಮರಿ ಸೇರಿದಂತೆ ಒಟ್ಟು 3 ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದವು.
ಗ್ರಾಮದ ದ್ಯಾವಪ್ಪ ಎಂಬ ರೈತನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ವೇಳೆ ಚಿರತೆ ಮರಿಗಳು ಪತ್ತೆಯಾಗಿದ್ದವು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದಾವಿಸಿದ್ದ ಅರಣ್ಯ ಅಧಿಕಾರಿಗಳು ಚಿರತೆ ಮರಿಗಳನ್ನು ವಶಕ್ಕೆ ತೆಗೆದುಕೊಂಡು ರಕ್ಷಿಸಿದ್ದರು.
ಗದ್ದೆಯಲ್ಲಿ ಮರಿ ಚಿರತೆಗಳನ್ನು ಬಿಟ್ಟುಹೋಗಿದ್ದ ತಾಯಿ ಚಿರತೆ ಮತ್ತೆ ಅದೇ ಸ್ಥಳಕ್ಕೆ ಬಂದು ಮರಿಗಳು ಕಾಣದಿದ್ದಾಗ ಉದ್ರೇಕಗೊಂಡು ಹಾನಿ ಉಂಟು ಮಾಡಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರಚಿಸಿ ಆ ಸ್ಥಳದಲ್ಲಿ ಬೋನುಗಳನ್ನು ಇರಿಸಿ ಇಂದು ( ಡಿಸೆಂಬರ್ 9 ) ತಾಯಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.