Mysore
22
mist

Social Media

ಮಂಗಳವಾರ, 06 ಜನವರಿ 2026
Light
Dark

ತಾಯಿ ನಿಗೂಢ ಸಾವಿನ ಬೆನ್ನಲ್ಲೇ ಮಗ ಆತ್ಮಹತ್ಯೆ

ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಶವ; ರೈಲ್ವೆ ಹಳಿ ಮೇಲೆ ಮಗನ ಶವ ಪತ್ತೆ

ಮಂಡ್ಯ: ತಾಯಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿಯೇ ಪತ್ತೆಯಾದ ಬೆನ್ನಲ್ಲೇ ಮಗನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ಕ್ರಿಶ್ಚಿಯನ್ ಕಾಲೋನಿಯ ನಿವೃತ್ತ ಶಿಕ್ಷಕಿ ವೀಣಾ ಜೋತಿನಿ (೬೩) ಮತ್ತು ಇವರ ಮಗ ನಿತಿನ್ (೩೨) ಮೃತಪಟ್ಟವರಾಗಿದ್ದು, ಇವರ ಸಾವಿನ ಸುತ್ತ ಹಲವು ಅನುಮಾನ ಸೃಷ್ಟಿಸಿದೆ.
ನೆಹರು ನಗರದ ಬಾಡಿಗೆ ಮನೆಯಲ್ಲಿ ತಾಯಿ ಮತ್ತು ಮಗ ವಾಸಿಸುತ್ತಿದ್ದರು. ಇದೇ ಮನೆಯಲ್ಲಿ ಶಿಕ್ಷಕಿ ವೀಣಾ ಜೋತಿನಿ ಅವರ ಮೃತದೇಹ ಹೊಸ ವರ್ಷದ ಮೊದಲ ದಿನವಾದ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇವರ ಮಗ ನಿತಿನ್ ಶವ ಮಂಡ್ಯ ನಗರದ ಹೊರವಲಯ ವಿ.ಸಿ ಫಾರಂ ಗೇಟ್‌ನ ಬಳಿ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಭಿನವ ಭಾರತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ವೀಣಾ ಮಗನ ಜತೆಯಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದರು. ಆರ್.ಪಿ. ರಸ್ತೆಯಲ್ಲಿದ್ದ ತಮಗೆ ಸೇರಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ಮಾರಾಟ ಮಾಡಿದ್ದರು, ಆಸ್ತಿ ಮಾರಾಟದ ಹಣವನ್ನು ಮಗ ನಿತಿನ್ ದುಂದು ವೆಚ್ಚ ಮಾಡಿ ಬೇಕಾಬಿಟ್ಟಿ ಕಳೆದಿದ್ದನು, ಅಷ್ಟೇ ಅಲ್ಲದೆ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದನು.
ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದನು ಎನ್ನಲಾಗಿದ್ದು, ಕ್ರಿಸ್ಮಸ್ ಹಬ್ಬವನ್ನು ತಾಯಿ-ಮಗ ಆಚರಿಸಿದ್ದರು. ಹೊಸ ವರ್ಷವನ್ನು ಸಂಭ್ರಮದಿAದ ಸ್ವಾಗತಿಸಬೇಕಾಗಿತ್ತು. ಅಷ್ಟರಲ್ಲೇ ಹೊಸ ವರ್ಷದ ಮೊದಲ ದಿನ ತನ್ನ ಮನೆಯಲ್ಲಿ ನಿವೃತ್ತ ಶಿಕ್ಷಕಿ ವೀಣಾ ಜೋತಿನಿ ಅವರ ಮೃತದೇಹ ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ನಿವೃತ್ತ ಶಿಕ್ಷಕಿ ಎತ್ತರವಾಗಿದ್ದು, ಆದರೆ ಅಷ್ಟು ಎತ್ತರ ಇರದ ಕಿಟಕಿಗೆ ನೇಣು ಬಿಗಿದುಕೊಳ್ಳಲು ಸಾಧ್ಯವೇ ಎಂಬ ಅನುಮಾನ ಸೃಷ್ಟಿಯಾಗಿ ಮಗನೇ ತಾಯಿಯನ್ನು ಕೊಂದಿರಬಹುದು ಎಂಬ ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಪಶ್ಚಿಮ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮಿಮ್ಸ್ಗೆ ರವಾನಿಸಿದ್ದರು, ತಾಯಿಯ ಸಾವಿನ ಬಗ್ಗೆ ತಿಳಿಯಲು ನಿತಿನ್‌ನನ್ನು ಭಾನುವಾರ ಸಂಜೆ ಪೊಲೀಸರು ಠಾಣೆಗೆ ಕರೆಸಿಕೊಂಡು ವಿಚಾರಣೆ ಮಾಡಿ, ವಾಪಸ್ ಕಳುಹಿಸಿದ್ದರು.
ತಾಯಿಯ ಶವ ಶವಾಗಾರದಲ್ಲಿ ಇರುವ ಸಮಯದಲ್ಲಿ ಮಗನ ಶವ ಕೂಡ ಸೋಮವಾರ ಬೆಳಗ್ಗೆ ವಿ.ಸಿ. ಫಾರಂ ಗೇಟ್ ಬಳಿಯ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಕೊಲೆಗೈದ ಪ್ರಾಯಶ್ಚಿತ್ತಕ್ಕೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನಾ ಅಥವಾ ತಾಯಿಯ ಸಾವಿನಿಂದ ಮನನೊಂದಿದ್ದನಾ, ಒಟ್ಟಾರೆ
ತಾಯಿಯ ಸಂಶಯಾಸ್ಪದ ಸಾವು, ಮಗನ ಆತ್ಮಹತ್ಯೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಿವೃತ್ತ ಶಿಕ್ಷಕಿಯ ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಬೇಕಾಗಿದ್ದು, ಮಗನ ಆತ್ಮಹತ್ಯೆ ಕಾರಣವನ್ನು ಪತ್ತೆ ಹಚ್ಚಬೇಕಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!